ಮಡಿಕೇರಿ, ಆ.30: ಜಿಲ್ಲೆಯಲ್ಲಿ ಕೊರೊನಾ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಸಾವಿನ ಸಂಖ್ಯೆ 21ಕ್ಕೆ ಏರಿದೆ. ಮಡಿಕೇರಿ ನಗರದ ಎಫ್.ಎಂ.ಕೆ.ಎಂ.ಸಿ ಕಾಲೇಜು ಬಳಿಯ ನಿವಾಸಿ 64 ವರ್ಷದ ಪುರುಷರೊಬ್ಬರು ಹಿಂದಿನಿಂದಲೂ ಮಧುಮೇಹ ಕಾಯಿಲೆಯಿಂದ ಮತ್ತು ಕಾಲಿನಲ್ಲಿ ಆಗಿದ್ದ ಗ್ಯಾಂಗ್ರಿನ್‍ನಿಂದ ಬಳಲುತ್ತಿದ್ದರು. ತಾ.29 ರಂದು ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದೆ. ತಕ್ಷಣ ಇವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಇವರಿಗೆ ಸುಸ್ತು ಮತ್ತು ಉಸಿರಾಟದ ತೊಂದರೆ ಇದ್ದ ಕಾರಣ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಿದ್ದು, ತಾ.29 ರಂದು ರಾತ್ರಿ 9.05ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತದೇಹದ ಅಂತ್ಯಕ್ರಿಯೆಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ 48 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1427 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, 1178 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 228 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ ಕೋವಿಡ್ ಆಸ್ಪತ್ರೆಯಲ್ಲಿ 61 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 56 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 111 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 232 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿ ಮೈತ್ರಿ ಹಾಲ್ ಬಳಿಯ ಪೆÇಲೀಸ್ ವಸತಿಗೃಹದ 23 ವರ್ಷದ 2 ಪುರುಷರು, ಮಡಿಕೇರಿ ಎಫ್.ಎಂ.ಸಿ. ಕಾಲೇಜು ಹಿಂಭಾಗದ 62 ವರ್ಷದ ಪುರುಷ, ನೆಲ್ಲಿಹುದಿಕೇರಿಯ ಬರಡಿ ಗ್ರಾಮದ 49 ವರ್ಷದ ಪುರುಷ, ನಾಪೆÇೀಕ್ಲು ಕಲ್ಲುಮೊಟ್ಟೆಯ ವೆಂಕಟೇಶ್ವರ ದೇವಾಲಯ ಬಳಿಯ 45 ವರ್ಷದ ಮಹಿಳೆ, 8 ವರ್ಷದ ಬಾಲಕ, 20 ಮತ್ತು 67 ವರ್ಷದ ಮಹಿಳೆ, ವೀರಾಜಪೇಟೆ ಚೆನ್ನಯ್ಯನಕೋಟೆಯ ಕೋಟೆ ಪೈಸಾರಿಯ 42 ವರ್ಷದ ಮಹಿಳೆ,ವೀರಾಜಪೇಟೆ ಗಾಂಧಿನಗರ ವಾಟರ್ ಟ್ಯಾಂಕ್ ಬಳಿಯ 41 ವರ್ಷದ ಪುರುಷ, ಪಿರಿಯಾಪಟ್ಟಣದ ಆರನಹಳ್ಳಿಯ 28 ವರ್ಷದ ಮಹಿಳೆ, ಸುಂಟಿಕೊಪ್ಪ ಶ್ರೀದೇವಿ ಲೇಔಟಿನ 30 ವರ್ಷದ ಪುರುಷ, ಕುಶಾಲನಗರ ಕೂಡ್ಲೂರಿನ ಸರ್ಕಾರಿ ಶಾಲೆ ಬಳಿಯ 28 ವರ್ಷದ ಮಹಿಳೆ, ಕುಶಾಲನಗರ ರಂಗಸಮುದ್ರದ ಸರ್ಕಾರಿ ಶಾಲೆ ಬಳಿಯ 65 ವರ್ಷದ ಮಹಿಳೆ, ಕೊಪ್ಪದ 26 ವರ್ಷದ ಪುರುಷ, ಕೂಡಿಗೆಯ ಸೈನಿಕ ಶಾಲೆ ವಸತಿಗೃಹದ 40 ವರ್ಷದ ಮಹಿಳೆ, ಗುಡ್ಡೆಹೊಸೂರಿನ ಮಾದಾಪಟ್ಟಣದ 26 ವರ್ಷದ ಪುರುಷ ಹಾಗೂ 55 ವರ್ಷದ ಪುರುಷ, 17 ವರ್ಷದ ಬಾಲಕ, 35,36 ಮತ್ತು 25 ವರ್ಷದ ಮಹಿಳೆ, ಕುಶಾಲನಗರ ಕೂಡ್ಲೂರುವಿನ ಸರ್ಕಾರಿ ಶಾಲೆ ಬಳಿಯ 29 ವರ್ಷದ ಪುರುಷ, ಕುಶಾಲನಗರ ಕೂಡುಮಂಗಳೂರುವಿನ ಡೈರಿ ಬಳಿಯ 22 ವರ್ಷದ ಪುರುಷ, ಸೋಮವಾರಪೇಟೆ ಎಂ.ಡಿ ಬ್ಲಾಕಿನ 47 ವರ್ಷದ ಮಹಿಳೆ, ಗೋಣಿಕೊಪ್ಪದ 7ನೇ ವಾರ್ಡಿನ ಅಂಚೆ ಕಚೇರಿ ಎದುರಿನ 62 ವರ್ಷದ ಪುರುಷ, 58 ವರ್ಷದ ಮಹಿಳೆ, 21 ಮತ್ತು 30 ವರ್ಷದ ಪುರುಷ, ಗೋಣಿಕೊಪ್ಪ ಕೈಕೇರಿಯ 39 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷ, ಪೆÇನ್ನಂಪೇಟೆ ಪೆÇಲೀಸ್ ವಸತಿಗೃಹದ 35 ವರ್ಷದ ಪುರುಷ, ಗೋಣಿಕೊಪ್ಪ ಪೆÇನ್ನಂಪೇಟೆ ರಸ್ತೆಯ ನಿಖಿತಾ ಬೇಕರಿ ಬಳಿಯ 20 ವರ್ಷದ ಪುರುಷ, ವೀರಾಜಪೇಟೆ ಮೈತಾಡಿ ಚಾಮಿಯಾಲ ಗ್ರಾಮದ 22 ವರ್ಷದ ಪುರುಷ, 56 ವರ್ಷದ ಮಹಿಳೆ ಮತ್ತು 98 ವರ್ಷದ ಮಹಿಳೆ, ವೀರಾಜಪೇಟೆ ನೆಹರು ನಗರದ 43 ವರ್ಷದ ಪುರುಷ, ಬೊಯಿಕೇರಿಯ 25 ವರ್ಷದ ಮಹಿಳೆ, ವೀರಾಜಪೇಟೆ ಸುಭಾಷ್ ನಗರದ 39 ವರ್ಷದ ಮಹಿಳೆ ಮತ್ತು 40 ವರ್ಷದ ಪುರುಷ, ನಾಪೆÇೀಕ್ಲುವಿನ ಸೇಕ್ರೆಡ್ ಹಾರ್ಟ್ ಶಾಲೆ ಬಳಿಯ 48 ವರ್ಷದ ಪುರುಷ, ನಾಪೆÇೀಕ್ಲುವಿನ ಇಂದಿರಾ ನಗರದ 42 ವರ್ಷದ ಮಹಿಳೆ, ಭಾಗಮಂಡಲ ಪೆÇಲೀಸ್ ವಸತಿಗೃಹದ 27, 28 ಮತ್ತು 29 ವರ್ಷದ ಪುರುಷರು, ಮಡಿಕೇರಿ ಕನ್ನಂಡಬಾಣೆಯ 39 ವರ್ಷದ ಮಹಿಳೆ, ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 39 ವರ್ಷದ ಪುರುಷ, ಸೋಮವಾರಪೇಟೆ ಕುಂಬೂರು ಅಂಚೆಯ ಬಸ್ ನಿಲ್ದಾಣ ಬಳಿಯ 23 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.