ಕೂಡಿಗೆ, ಆ. 30: ಕೂಡಿಗೆ ಗ್ರಾಪಂ ವ್ಯಾಪ್ತಿಯ ಗಿರಿಜನ ಹಾಡಿಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಜಾಗೃತಿ ಕಾರ್ಯಕ್ರಮ ನಡೆಸಿದರು.
ಹುದುಗೂರಿನ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ ಕಾರ್ಯಕರ್ತರು ಹಾಡಿ ನಿವಾಸಿಗಳಲ್ಲಿ ಕೊರೊನಾ ಮುಂಜಾಗ್ರತೆ ಕ್ರಮಗಳು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು.
ಪ್ರಸ್ತುತ ಶಾಲೆಗಳು ಬಂದ್ ಆಗಿರುವ ಕಾರಣ ಸಂಸಾರ ನಿಭಾಯಿಸಲಾಗದೆ ಅಪ್ರಾಪ್ತರನ್ನು ಮದುವೆ ಮಾಡಿಕೊಡುವ ಸಾಧ್ಯತೆಯಿರುವ ಕಾರಣ ಬಾಲ್ಯವಿವಾಹ ನಡೆಸದಂತೆ ಸೂಚನೆ ನೀಡಲಾಯಿತು. ತೋಟ ಮತ್ತು ದೂರದ ಸ್ಥಳಗಳಿಗೆ ಕೆಲಸಕ್ಕೆ ತೆರಳುವ ಪೆÇೀಷಕರು ತಮ್ಮ ಹೆಣ್ಣುಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಹೋದರೆ ಆಗಂತುಕರಿಂದ ಅಪಾಯ ಸಂಭವಿಸುವ ಆತಂಕದಿಂದ ಜೊತೆಯಲ್ಲೇ ಕೆಲಸಕ್ಕೆ ಕರೆದೊಯ್ಯುತ್ತಾರೆ. ಅಂತಹವರು ಯಾವುದೇ ಕಾರಣಕ್ಕೂ ಮಕ್ಕಳ ಮೂಲಕ ಕೂಲಿ ಕೆಲಸ ಮಾಡಿಸಬಾರದು ಎಂದು ಜಾಗೃತಿ ಮೂಡಿಸಲಾಯಿತು.
ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಕುಸುಮ ಮತ್ತು ಪ್ರವೀಣ್ ಜಾಗೃತಿ ಮೂಡಿಸಿದರು. ಕೂಡಿಗೆ ಗ್ರಾಪಂ ವ್ಯಾಪ್ತಿಯ ಗಿರಿಜನ ಹಾಡಿಗಳಲ್ಲಿ ಮಕ್ಕಳ ಸಹಾಯವಾಣಿ ಕಾರ್ಯಕರ್ತರು ಜಾಗೃತಿ ಕಾರ್ಯಕ್ರಮ ನಡೆಸಿದರು.
ಹುದುಗೂರಿನ ಗಿರಿಜನ ಹಾಡಿಗಳಿಗೆ ಭೇಟಿ ನೀಡಿದ ಕಾರ್ಯಕರ್ತರು ಹಾಡಿ ನಿವಾಸಿಗಳಲ್ಲಿ ಕೊರೊನಾ ಮುಂಜಾಗ್ರತೆ ಕ್ರಮಗಳು, ಬಾಲ್ಯವಿವಾಹ, ಬಾಲಕಾರ್ಮಿಕ ಪದ್ದತಿ ತಡೆಗಟ್ಟುವ ಬಗ್ಗೆ ಅರಿವು ಮೂಡಿಸಿದರು. ಮಕ್ಕಳ ಸಹಾಯವಾಣಿ ಕಾರ್ಯಕರ್ತರಾದ ಕುಸುಮ ಮತ್ತು ಪ್ರವೀಣ್ ಮಾಹಿತಿ ನೀಡಿದರು.