*ಗೋಣಿಕೊಪ್ಪಲು, ಆ. 29: ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಗೌರಿ ಎಂಬಾಕೆ ಮೃತಪಟ್ಟಿದ್ದು, ಸಂಬಂಧಿಸಿದವರು ಇಲ್ಲದ ಹಿನ್ನೆಲೆ ಮೃತದೇಹವನ್ನು ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಸಂಬಂಧಿಕರಿದ್ದಲ್ಲಿ ಗೋಣಿಕೊಪ್ಪಲು ಪೆÇಲೀಸ್ ಠಾಣೆಗೆ (08274 247333) ಮಾಹಿತಿ ನೀಡಿ ಮೃತದೇಹ ಪಡೆದುಕೊಳ್ಳಬಹುದಾಗಿದೆ ಗೋಣಿಕೊಪ್ಪಲುವಿನ ಪೆÇಲೀಸ್ ಠಾಣೆಯ ಪ್ರಕಟಣೆಯಲ್ಲಿ ತಿಳಿಸಿದೆ.