ವೀರಾಜಪೇಟೆ, ಆ. 29: ಕೊಡಗು-ಕೇರಳ ಗಡಿ ಪ್ರದೇಶವಾದ ಮಾಕುಟ್ಟ ಚೆಕ್ಪೋಸ್ಟ್ ತೆರವು ಆದ ನಂತರ ಕೊಡಗು-ಕೇರಳದ ವಾಣಿಜ್ಯ ವ್ಯವಹಾರಗಳು ಅಲ್ಪ ಚೇತರಿಕೆ ಗೊಂಡಿದ್ದು ಈಗ ಕೇರಳಕ್ಕೆ ದಿನ ನಿತ್ಯ ಮೈಸೂರಿನಿಂದ ತರಕಾರಿಗಳು, ದಿನಸಿ ಪದಾರ್ಥಗಳು ಹಾಗೂ ದಕ್ಷಿಣ ಕೊಡಗಿನಿಂದ ಒಣ ಹುಲ್ಲು ನಿರಂತರ ವಾಗಿ ಸಾಗಾಟವಾಗುತ್ತಿದ್ದು ಇದರಿಂದ ರೈತರು ಒಣ ಹುಲ್ಲಿಗೆ ನ್ಯಾಯ ಸಮ್ಮತವಾದ ಬೆಲೆ ಪಡೆಯು ವಂತಾಗಿದೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಸುಮಾರು ಐದು ತಿಂಗಳ ಕಾಲ ಕುಟ್ಟ, ಮಾಕುಟ್ಟ ಸೇರಿದಂತೆ ಎಲ್ಲ ಕೊಡಗಿನ ಗಡಿಭಾಗಗಳನ್ನು ಪೂರ್ಣವಾಗಿ ಬಂದ್ ಮಾಡಲಾಗಿತ್ತು. ಇದರಿಂದ ಕರ್ನಾಟಕ, ಕೊಡಗು, ಕೇರಳದ ಅಂತರರಾಜ್ಯ ಸಂಪರ್ಕ ಕಡಿತ ಗೊಂಡು ಎಲ್ಲ ವಾಣಿಜ್ಯ ವ್ಯವಹಾರಗಳು ಸ್ಥಗಿತಗೊಂಡಿದ್ದವು. ವರ್ತಕರು ಮೂಲೆ ಗುಂಪಾಗಿದ್ದರು.
ಈಗ ಅಂತರರಾಜ್ಯದ ಗಡಿ ಭಾಗದ ಎಲ್ಲ ಗೇಟ್ಗಳು ಎಲ್ಲ ರೀತಿಯ ವಾಹನಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗಿರು ವುದರಿಂದ ದಕ್ಷಿಣ ಕೊಡಗಿನಲ್ಲಿ ಕಳೆದ ಡಿಸೆಂಬರ್ ತಿಂಗಳಿಂದ ಆಗಸ್ಟ್ ತಿಂಗಳ ತನಕ
(ಮೊದಲ ಪುಟದಿಂದ) ರೈತರು ದಾಸ್ತಾನು ಮಾಡಿದ್ದ ಒಣ ಹುಲ್ಲಿಗೆ ಬೇಡಿಕೆ ಇಲ್ಲದೆ ಕಂಗಾಲಾಗಿದ್ದರು. ಅಂತರರಾಜ್ಯ ಸಂಪರ್ಕವನ್ನು ಬೆಸೆಯುವ ರಾಜ್ಯ ಹೆದ್ದಾರಿಯ ಚೆಕ್ಪೋಸ್ಟ್ನ ಮೂಲಕ ಎರಡು ರಾಜ್ಯಗಳ ವಾಣಿಜ್ಯ ವ್ಯವಹಾರಗಳು ಮುಂದುವರೆದಿವೆ.
ದಕ್ಷಿಣ ಕೊಡಗಿನ ಕಾಕೋಟುಪರಂಬು, ಮೈತಾಡಿ, ಕದನೂರು, ಕಡಂಗ, ತಿತಿಮತಿ, ಪಿರಿಯಾಪಟ್ಟಣ, ಕೆ.ಆರ್. ನಗರ ಸೇರಿದಂತೆ ಪ್ರತಿ ದಿನ ಐದರಿಂದ ಹತ್ತು ಲಾರಿ, ಮಿನಿ ಲಾರಿ ಲೋಡ್ಗಳಷ್ಟು ಒಣ ಹುಲ್ಲು ಕೇರಳಕ್ಕೆ ಸಾಗಾಟವಾಗಲು ಪ್ರಾರಂಭವಾಗಿದೆ. ದಕ್ಷಿಣ ಕೊಡಗು ಹಾಗೂ ಇತರೆಡೆಗಳಲ್ಲಿ ಕಂತೆಯ ಗಾತ್ರದ ಪ್ರಮಾಣದಲ್ಲಿ ಒಂದು ಹುಲ್ಲಿನ ಕಂತೆಗೆ ರೂ. 12ರಿಂದ ರೂ. 15ಕ್ಕೆ ಖರೀದಿಸಲಾಗುತ್ತಿದೆ. ಇದೇ ಹುಲ್ಲು ಕೇರಳದ ಇರಿಟ್ಟಿ, ಕೂತುಪರಂಬು ಇತರೆಡೆಗಳಲ್ಲಿ ಒಂದು ಕಂತೆ ಹುಲ್ಲು ರೂ. 30ರಿಂದ 35 ರತನಕ ಮಾರಾಟ ಮಾಡಲಾಗುತ್ತದೆ. ಒಣ ಹುಲ್ಲಿನ ಕೇರಳದ ಮಾರುಕಟ್ಟೆ ಕೊಡಗಿನ ರೈತರಿಗೆ ಲಾಭದಾಯಕವಾಗಿದೆ. ಇದೇ ಹುಲ್ಲಿನ ಕಂತೆಯನ್ನು ಕೊಡಗಿನಲ್ಲಿ ಸ್ಥಳೀಯರು ರೂ. 3 ರಿಂದ 5ರ ತನಕ ಖರೀದಿಸುತ್ತಾರೆ. ಇದರಿಂದಾಗಿ ರೈತರು ಒಣ ಹುಲ್ಲು ಮಾರಾಟಕ್ಕಾಗಿ ಕೇರಳದ ಮಾರುಕಟ್ಟೆಯನ್ನು ಅವಲಂಭಿಸುತ್ತಿದ್ದಾರೆ.
ಕಳೆದ 2014ರಿಂದ 2018ರ ತನಕ ರಾಜ್ಯ ಸರಕಾರ ಮೂರು ಬಾರಿ ಕೊಡಗಿನಿಂದ ಅಂತರರಾಜ್ಯ ಒಣ ಹುಲ್ಲನ್ನು ನಿಷೇಧಿಸಿದ್ದಾಗ ಮೂರು ಬಾರಿಯೂ ಕಾಕೋಟುಪರಂಬಿನ ರೈತ ಸಂಘಟನೆಯ ಪರವಾಗಿ ಸಂಘಟನೆಯ ಮಂಡೇಟೀರ ಅನಿಲ್, ಇತರರು ಉಚ್ಚ ನ್ಯಾಯಾಲಯದಿಂದ ಸರಕಾರದ ನಿಷೇಧಕ್ಕೆ ತಡೆಯಾಜ್ಞೆ ತಂದಿದ್ದರು. ಈ ಬಾರಿ ರಾಜ್ಯ ಸರಕಾರವೇ ರೈತರ ಪರವಾಗಿ ಒಣಹುಲ್ಲು ಅಂತರರಾಜ್ಯ ಸಾಗಾಟಕ್ಕೆ ಅವಕಾಶ ಮಾಡಿಕೊಟ್ಟಿರುವುದು ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಅವಕಾಶ ಉಂಟಾಗಿದೆ. -ಡಿ.ಎಂ.ಆರ್.