ನಾಪೆÇೀಕ್ಲು, ಆ. 29: ಈ ಬಾರಿಯ ಧಾರಾಕಾರ ಮಳೆಯಿಂದ 12 ಮನೆಗಳು ಸಂಪೂರ್ಣವಾಗಿ ಕುಸಿದು ಹೋಗಿದ್ದು ಅವರಿಗೆ ಸರ್ಕಾರದಿಂದ 5ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿಸ್ ಕಣ್ಮಣಿ ಜಾಯ್ ಹೇಳಿದರು. ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಟ್ಟಮುಡಿ ಮತ್ತು ಹೊದವಾಡ ಗ್ರಾಮಗಳಲ್ಲಿ ಇತ್ತೀಚಿನ ಮಳೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.ಜಿಲ್ಲೆಯ ಪ್ರಕೃತಿ ವಿಕೋಪ ಸ್ಥಳಗಳಿಗೆ ಕೇಂದ್ರ ಸರಕಾರದ ಅಧ್ಯಯನ ತಂಡವು ಪರಿಶೀಲನೆ ನಡೆಸುವ ಸಲುವಾಗಿ ಜಿಲ್ಲೆಯ ಕೊಟ್ಟಮುಡಿ, ಬಲಮುರಿ, ಹೊದವಾಡ, ನಾಪೆÇೀಕ್ಲು, ದೊಡ್ಡಪುಲಿಕೊಟ್, ಭಾಗಮಂಡಲ, ತಲಕಾವೇರಿ, ಚೇರಂಗಾಲ, ಕೋಡಿ ಸೇತುವೆ, ಮತ್ತಡಿ ಸೇತುವೆ, ಚೇರಂಬಾಣೆ, ಬೇಂಗೂರು, ಗ್ರಾಮಗಳಿಗೆ ಆಗಮಿಸುತ್ತಿದ್ದು, ಈ ಸ್ಥಳಗಳಿಗೆ ಅಧ್ಯಯನ ತಂಡ ಭೇಟಿ ನೀಡುವ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲಿಸಿದರು. ಈ ಬಾರಿ ಪ್ರವಾಹದಿಂದ (ಮೊದಲ ಪುಟದಿಂದ) ನಿರಾಶ್ರಿತರಾದವರು ಇಲ್ಲದಿರುವುದರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. ವಸತಿ ರಹಿತರು ಮನೆಗಾಗಿ ಬೇಡಿಕೆ ಸಲ್ಲಿಸಿದರೆ ಗೃಹನಿರ್ಮಾಣ ಇಲಾಖಾ ವತಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದರು.

ಪ್ರವಾಹದ ಸಂದರ್ಭ ನಾಪೋಕ್ಲು-ಮಡಿಕೇರಿ ಮುಖ್ಯರಸ್ತೆಗೆ ರಸ್ತೆಬದಿಯ ಗಿಡಗಂಟಿಗಳು ಬಿದ್ದು ಸಂಚಾರಕ್ಕೆ ಅಡಚಣೆಯಾಗುತ್ತಿದೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಎಸ್.ಎಂ. ಕಾವೇರಪ್ಪ ಜಿಲ್ಲಾಧಿಕಾರಿಯವರ ಗಮನಕ್ಕೆ ತಂದರು. ಇದೇ ಸಂದರ್ಭದಲ್ಲಿ ಭಾಗಮಂಡಲ ಗ್ರಾ.ಪಂ. ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು.

ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ, ಉಪವಿಭಾಗಾಧಿಕಾರಿ ಈಶ್ವರ ಕುಮಾರ್ ಖಂಡು, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ¯ಕ್ಷ್ಮೀ, ಅರಣ್ಯಾಧಿಕಾರಿ ನೀಲೇಶ್, ತೋಟಗಾರಿಕೆ ಇಲಾಖೆ ಉಪ ನಿದೆರ್Éೀಶಕರು, ಅಬಕಾರಿ ಇಲಾಖೆಯ ಅಧೀಕ್ಷಕಿ ಬಿಂದುಶ್ರೀ, ಕೃಷಿ ಇಲಾಖೆ, ಕಾಫಿ ಮಂಡಳಿಯ ಉಪನಿರ್ದೇಶಕರು, ಕಾರ್ಯನಿರ್ವಾಹಕ ಇಂಜಿನಿಯರ್, ಮಡಿಕೇರಿ ತಾಲೂೀಕು ತಹಶೀಲ್ದಾರ್ ಮಹೇಶ್, ಭಾಗಮಂಡಲ ದೇವಾಲಯ ವ್ಯವಸ್ಥಾಪನಾ ಸಮಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಕುಮಾರ್, ಹೊದ್ದೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಹಂಸ, ಮಡಿಕೇರಿ ಡಿವೈಎಸ್‍ಪಿ ದಿನೇಶ್ ಕುಮಾರ್, ಕೂಡ್ಯೊಳಂಡ ರಮೇಶ್ ಮುದ್ದಯ್ಯ, ನಾಪೆÇೀಕ್ಲು ಪಿಡಿಒ ಚೋಂದಕ್ಕಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.