ಮಡಿಕೇರಿ, ಆ. 29: ಸಂದೀಪ್ ಮಡಿಕೇರಿ ಫೈನ್ ಆರ್ಟ್ ಟ್ರಸ್ಟ್ ವತಿಯಿಂದ ತಾ. 30 ರಂದು (ಇಂದು) ಮೊಹರಂ ಪ್ರಯುಕ್ತ ಮಧ್ಯಾಹ್ನ 3 ಗಂಟೆಗೆ ಉಚಿತವಾಗಿ ಚಿತ್ರ ಬಿಡಿಸುವ ತರಬೇತಿ ನೀಡಲಾಗುವುದು. ಮಡಿಕೇರಿಯ ರಾಜಾಸೀಟ್ ಉದ್ಯಾನವನದಲ್ಲಿ ವಯಸ್ಸಿನ ವಯೋಮಿತಿ ಇಲ್ಲದೆ ಕ್ಯಾನ್ವಸ್ ಮೇಲೆ ರಾಜಾಸೀಟ್‍ನ ಚಿತ್ರ ಬಿಡಿಸಲು ತರಬೇತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊ. 7026361068 ಅನ್ನು ಸಂಪರ್ಕಿಸಬಹುದು ಎಂದು ಸಂದೀಪ್ ಕುಮಾರ್ ತಿಳಿಸಿದ್ದಾರೆ.