ಪೆÇನ್ನಂಪೇಟೆ, ಆ. 29: ಕೊರೊನಾ ಮಹಾಮಾರಿ ವಿಶ್ವವ್ಯಾಪಿಯಾಗಿದ್ದು ರಾಜ್ಯದಲ್ಲಿಯೂ ಶ್ರೀ ಸಾಮಾನ್ಯರನ್ನು ಭಯ ಭೀತಗೊಳಿಸಿದೆ. ಬಡ, ಮಧ್ಯಮ ವರ್ಗದವರ, ಆದಿವಾಸಿಗಳ ಕಷ್ಟ ಆಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ದಿನಸಿ ‘ಕಿಟ್’ ನೀಡಲಾಗುತ್ತಿದೆ. ಮುಂದೆಯೂ ಜಿಲ್ಲೆಯ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಎ.ಕೆ.ಸುಬ್ಬಯ್ಯ-ಪೆÇನ್ನಮ್ಮ ಶೈಕ್ಷಣಿಕ ಮತ್ತು ದತ್ತಿ ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುವದು. ಈವರೆಗೆ ಸುಮಾರು ರೂ.40 ಲಕ್ಷ ಅಂದಾಜು ವೆಚ್ಚದಲ್ಲಿ ಒಟ್ಟು 4600 ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಟ್ರಸ್ಟ್‍ನ ಮುಖ್ಯಸ್ಥ, ಸರಕಾರದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೆÇನ್ನಣ್ಣ ಹೇಳಿದರು.
ಇಂದು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಹಾಡಿಗಳಲ್ಲಿ ಆದಿವಾಸಿಗಳು, ದೀನದಲಿತರು, ಅಲ್ಪ ಸಂಖ್ಯಾತವರ್ಗಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಇಂದು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ತಟ್ಟಳ್ಳಿ ಹಾಡಿ, ಕಲ್ಲಳ್ಳ ಗೇಟ್ ಹಾಡಿ, ದೊಡ್ಡಡ್ಲು ಹಾಡಿ, ಹಣ್ಣಿನ ತೋಟ, ಚೊಟ್ಟಪಾಳಿ ಕಾಲೋನಿ, ಮಾಲ್ದಾರೆಯ ಆಸ್ಥಾನ ಎಂಬಲ್ಲಿನ ಪೆÇನ್ನಂಪೇಟೆ, ಆ. 29: ಕೊರೊನಾ ಮಹಾಮಾರಿ ವಿಶ್ವವ್ಯಾಪಿಯಾಗಿದ್ದು ರಾಜ್ಯದಲ್ಲಿಯೂ ಶ್ರೀ ಸಾಮಾನ್ಯರನ್ನು ಭಯ ಭೀತಗೊಳಿಸಿದೆ. ಬಡ, ಮಧ್ಯಮ ವರ್ಗದವರ, ಆದಿವಾಸಿಗಳ ಕಷ್ಟ ಆಲಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ದಿನಸಿ ‘ಕಿಟ್’ ನೀಡಲಾಗುತ್ತಿದೆ. ಮುಂದೆಯೂ ಜಿಲ್ಲೆಯ ಜನತೆಯ ಕಷ್ಟ ಕಾರ್ಪಣ್ಯಗಳಿಗೆ ಎ.ಕೆ.ಸುಬ್ಬಯ್ಯ-ಪೆÇನ್ನಮ್ಮ ಶೈಕ್ಷಣಿಕ ಮತ್ತು ದತ್ತಿ ಸಂಸ್ಥೆ ವತಿಯಿಂದ ಸಹಕಾರ ನೀಡಲಾಗುವದು. ಈವರೆಗೆ ಸುಮಾರು ರೂ.40 ಲಕ್ಷ ಅಂದಾಜು ವೆಚ್ಚದಲ್ಲಿ ಒಟ್ಟು 4600 ಆಹಾರ ಕಿಟ್ ವಿತರಣೆ ಮಾಡಲಾಗಿದೆ ಎಂದು ಟ್ರಸ್ಟ್‍ನ ಮುಖ್ಯಸ್ಥ, ಸರಕಾರದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎ.ಎಸ್. ಪೆÇನ್ನಣ್ಣ ಹೇಳಿದರು.
ಇಂದು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ವಿವಿಧ ಹಾಡಿಗಳಲ್ಲಿ ಆದಿವಾಸಿಗಳು, ದೀನದಲಿತರು, ಅಲ್ಪ ಸಂಖ್ಯಾತವರ್ಗಗಳಿಗೆ ಆಹಾರ ಕಿಟ್ ವಿತರಿಸಿ ಮಾತನಾಡಿದರು.
ಇಂದು ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ತಟ್ಟಳ್ಳಿ ಹಾಡಿ, ಕಲ್ಲಳ್ಳ ಗೇಟ್ ಹಾಡಿ, ದೊಡ್ಡಡ್ಲು ಹಾಡಿ, ಹಣ್ಣಿನ ತೋಟ, ಚೊಟ್ಟಪಾಳಿ ಕಾಲೋನಿ, ಮಾಲ್ದಾರೆಯ ಆಸ್ಥಾನ ಎಂಬಲ್ಲಿನ ಮಾತನಾಡಿ, ದುರ್ಬಲ ವರ್ಗದ ನೆರವಿಗೆ ಎ.ಎಸ್.ಪೆÇನ್ನಣ್ಣ ಸಹೋದರರು ಮುಂದಾಗಿರುವದು ಹೆಮ್ಮೆಯ ವಿಷಯವಾಗಿದೆ. ಪಕ್ಷಾತೀತವಾಗಿ, ಜಾತ್ಯತೀತವಾಗಿ ಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಮಾಜಿ ತಾ.ಪಂ. ಸದಸ್ಯರಾದ ಜಾನ್‍ಸನ್ ಹಾಗೂ ಹುಂಡಿಯ ಹಂಸ ಅವರು ದಿ. ಎ.ಕೆ.ಸುಬ್ಬಯ್ಯ ಅವರ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ದಿ.ಎ.ಕೆ.ಎಸ್. ಪುತ್ರ, ಕಾಂಗ್ರೆಸ್ ಪ್ರಮುಖ ಎ.ಎಸ್.ನರೇನ್ ಕಾರ್ಯಪ್ಪ, ಮಾಲ್ದಾರೆ ಕಾಂಗ್ರೆಸ್ ವಲಯಾಧ್ಯಕ್ಷ ಶಾಜಿ, ಸಿದ್ದಾಪುರ ಕ್ಷೇತ್ರ, ಬಾಡಗ ಬಾಣಂಗಾಲ ತಾ.ಪಂ. ಸದಸ್ಯೆ ಹೆಚ್.ಕೆ. ಚಿನ್ನಮ್ಮ, ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ರಾಜೇಶ್ ಪದ್ಮನಾಭ, ಮಹಮ್ಮದ್ ರಫಿ, ವೀರಾಜಪೇಟೆ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಲೋಹಿತ್ ಗೌಡ, ಮಾಲ್ದಾರೆಯ ಥೋಮಸ್, ಹುದಿಕೇರಿಯ ಅಜ್ಜಿಕುಟ್ಟೀರ ಗಿರೀಶ್, ಅಜ್ಜಿಕುಟ್ಟೀರ ಪ್ರಶಾಂತ್, ಕೇಶವ್ ಕಾಮತ್, ವೀರಾಜಪೇಟೆಯ ನರೇಂದ್ರ ಕಾಮತ್, ಬೆಂಗಳೂರು ವಕೀಲ ಪ್ರವೀಣ್ ಕಾಮತ್, ಜೆ.ಎಸ್. ಶಂಕರ್, ಉಮೇಶ್, ಮಹಾದೇವ, ಮಹಮ್ಮದ್ ಆಲಿ, ಅಬ್ದುಲ್ ರಜಾಕ್, ಲಲಿತಾ, ಹುಂಡಿಯ ಶಮೀರ್ ಮುಂತಾದವರು ಉಪಸ್ಥಿತರಿದ್ದರು.