ಸೆಪ್ಟೆಂಬರ್ ಅಂತ್ಯದವರೆಗೆ ಶಾಲೆ, ಕಾಲೇಜು ತರಗತಿ ಇಲ್ಲ
ನವದೆಹಲಿ, ಆ. 29: ಸೆಪ್ಟೆಂಬರ್ ಅಂತ್ಯದವರೆಗೆ ಶಿಕ್ಷಣ ಸಂಸ್ಥೆ ತೆರೆಯುವುದಿಲ್ಲ. ಯಾವುದೇ ಶಾಲೆ, ಕಾಲೇಜ್ ಸೇರಿದ ಶಿಕ್ಷಣ ಸಂಸ್ಥೆ ತೆರೆಯುವಂತೆ ಇಲ್ಲ. ಆದರೆ ಶಿಕ್ಷಕರು, ಭೋದಕೇತರ ವರ್ಗ ಶಾಲೆಗೆ ಬರಬೇಕು. ತಾ.9 ರಿಂದ ಕಾಲೇಜ್ಗಳ ವಿದ್ಯಾರ್ಥಿಗಳು ಕಾಲೇಜ್ಗೆ ಭೇಟಿ ನೀಡಲು ಅವಕಾಶ ನೀಡಲಾಗಿದೆ. ಕೇಂದ್ರ ಸರಕಾರದಿಂದ ಅನ್ಲಾಕ್ 4ರ ಹಂತದ ಮಾರ್ಗಸೂಚಿ ಬಿಡುಗಡೆಯಾಗಿದ್ದು, ಥಿಯೇಟರ್, ಈಜುಕೊಳ ಮನರಂಜನಾ ಪಾರ್ಕ್ ತೆರೆಯುವಂತಿಲ್ಲ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಲಾಕ್ ಡೌನ್ ದೇಶವ್ಯಾಪಿ ಇರುವುದಿಲ್ಲ. ವಿದೇಶಗಳಿಗೆ ವಿಮಾನ ಸಂಚಾರ ಇರುವುದಿಲ್ಲ ಎಂದು ತಿಳಿಸಲಾಗಿದೆ. ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲು ಸಂಚಾರ ಆರಂಭವಾಗಲಿದೆ. ಧಾರ್ಮಿಕ, ಸಾಮಾಜಿಕ, ರಾಜಕೀಯ ಕಾರ್ಯಕ್ರಮಗಳನ್ನು ಸೆಪ್ಟೆಂಬರ್ 21ರಿಂದ ಆಯೋಜಿಸಬಹುದಾಗಿದೆ. ಸೂಕ್ತ ಷರತ್ತಿನ ನಿಯಮ ಪಾಲಿಸಬೇಕು. 100 ಮಂದಿ ಮಾಸ್ಕ್ ಧರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಅತ್ಯುನ್ನತ ಕ್ರೀಡಾ ಗೌರವ ಪ್ರದಾನ
ನವದೆಹಲಿ, ಆ. 29: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ರಿಯೊ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಕ್ರೀಡಾಪಟು ಮರಿಯಪ್ಪನ್ ತಂಗವೇಲು, ಟೇಬಲ್ ಟೆನ್ನಿಸ್ ತಾರೆ ಮಾನಿಕಾ ಬಾತ್ರಾ ಮತ್ತು ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್ ಅವರಿಗೆ ದೇಶದ ಅತ್ಯುನ್ನತ ಕ್ರೀಡಾ ಗೌರವ ರಾಜೀವ್ ಗಾಂಧಿ ಖೇಲ್ ರತ್ನ ನೀಡಿ ಸನ್ಮಾನಿಸಿದರು. ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳ ಇತಿಹಾಸದಲ್ಲಿ ಮೊದಲ ಬಾರಿಗೆ ರಾಷ್ಟ್ರಪತಿ ಭವನದಿಂದ ನಡೆದ ವರ್ಚುಯಲ್ ಸಮಾರಂಭದಿಂದ ರಾಷ್ಟ್ರಪತಿಗಳು ಅರ್ಜುನ ಪ್ರಶಸ್ತಿ, ದ್ರೋಣಾಚಾರ್ಯ ಪ್ರಶಸ್ತಿ ಮತ್ತು ಧ್ಯಾನ್ಚಂದ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಾಕಿ ಜಾದೂಗಾರ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವಾದ ಆಗಸ್ಟ್ 29 ರಂದು ದೇಶಾದ್ಯಂತ ರಾಷ್ಟ್ರೀಯ ಕ್ರೀಡಾ ದಿನವಾಗಿ ಆಚರಿಸಲಾಗುತ್ತಿದ್ದು, ಐದು ರಾಜೀವ್ ಗಾಂಧಿ ಖೇಲ್ ರತ್ನ, 27 ಅರ್ಜುನ ಪ್ರಶಸ್ತಿಗಳನ್ನು ರಾಷ್ಟ್ರಪತಿ ಪ್ರದಾನ ಮಾಡಿದರು. 74 ಜನರ ಪೈಕಿ ವಿವಿಧ ನಗರಗಳ 11 ಭಾರತೀಯ ಕ್ರೀಡಾ ಪ್ರಾಧಿಕಾರದಿಂದ 60 ಮಂದಿ ವರ್ಚುಯಲ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಶಾಲೆಗಳು ಶುಲ್ಕ ವಿಧಿಸುವಂತಿಲ್ಲ
ನವದೆಹಲಿ, ಆ. 29: ಶಾಲೆಗಳು ಮತ್ತೆ ಆರಂಭವಾಗುವವರೆಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕ ವಿಧಿಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಶಾಲಾ ಆಡಳಿತ ಮಂಡಳಿಗಳಿಗೆ ಶನಿವಾರ ಎಚ್ಚರಿಕೆ ನೀಡಿದೆ. ಜುಲೈನಿಂದ ಬೋಧನಾ ಶುಲ್ಕದೊಂದಿಗೆ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ಪಡೆಯುತ್ತಿರುವ ಖಾಸಗಿ ಶಾಲೆಗಳ ವಿರುದ್ಧ ಖಾಸಗಿ ಶಾಲೆಯೊಂದರ ಪೆÇೀಷಕರ ಸಂಘ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಯಂತ್ ನಾಥ್ ಅವರು ಪ್ರಸ್ತುತ ಲಾಕ್ಡೌನ್ನ ಬಾಕಿ ಇರುವ ಸಮಯದಲ್ಲಿ ವಿದ್ಯಾರ್ಥಿಗಳ ಪೆÇೀಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಮುಂದಿನ ಆದೇಶದವರೆಗೆ ಪೆÇೀಷಕರಿಂದ ವಾರ್ಷಿಕ ಮತ್ತು ಅಭಿವೃದ್ಧಿ ಶುಲ್ಕವನ್ನು ತೆಗೆದುಕೊಳ್ಳದಂತೆ ನ್ಯಾಯಾಲಯ ನಿರ್ಬಂಧಿಸಿದೆ. ಈ ಸಂಬಂಧ ಹೈಕೋರ್ಟ್ ದೆಹಲಿ ಸರ್ಕಾರ ಮತ್ತು ಖಾಸಗಿ ಶಾಲೆಗೆ ನೋಟಿಸ್ ಜಾರಿಗೊಳಿಸಿದೆ.
ದೇಶದಲ್ಲಿ 4 ಕೋಟಿ ಕೋವಿಡ್ ಪರೀಕ್ಷೆ
ನವದೆಹಲಿ, ಆ. 29: ದೇಶದಲ್ಲಿ ಶನಿವಾರದ ವೇಳೆಗೆ 4 ಕೋಟಿಗೂ ಹೆಚ್ಚು ಕೋವಿಡ್-19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ ಮತ್ತು ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ 4,04,06,609 ಜನರನ್ನು ಪರೀಕ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಐಸಿಎಂಆರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 9,28,761 ಪರೀಕ್ಷೆಗಳನ್ನು ನಡೆಸಲಾಗಿದ್ದು, ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ಇದಾಗಿದೆ. ಪ್ರತಿ ಹತ್ತುಲಕ್ಷ ಜನರಲ್ಲಿ ಪರೀಕ್ಷೆ ಪ್ರಮಾಣ (ಟಿಪಿಎಂ) 29,280 ಕ್ಕೆ ಏರಿದೆ. ಪರೀಕ್ಷೆ ಪ್ರಮಾಣವನ್ನು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿಸಿರುವುದರಿಂದ ದೃಢಪಟ್ಟ ಪ್ರಕರಣಗಳ ಪ್ರಮಾಣವು ಅಂತಿಮವಾಗಿ ಕುಸಿಯಲಿದೆ.
ಇಂದ್ರಜಿತ್ ಲಂಕೇಶ್ಗೆ ನೋಟೀಸ್
ಬೆಂಗಳೂರು, ಆ. 29: ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ಇದೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಹಿನ್ನೆಲೆ ಚಿತ್ರ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರಿಗೆ ಕೇಂದ್ರ ಅಪರಾಧ ವಿಭಾಗದ ಮಾದಕ ದ್ರವ್ಯ ನಿಗ್ರಹ ದಳ ನೋಟಿಸ್ ನೀಡಿದೆ. ಡ್ರಗ್ಸ್ ವಿರುದ್ಧದ ಹೋರಾಟದಲ್ಲಿ ಬಂದು ಮಾಹಿತಿ ವಿನಿಮಯ ಮಾಡಿಕೊಳ್ಳುವ ಮೂಲಕ ಬೆಂಗಳೂರು ಪೆÇಲೀಸರಿಗೆ ಬೆಂಬಲ ನೀಡಿ ಎಂದು ಸಿಸಿಬಿ ತಿಳಿಸಿದೆ. ಸ್ಯಾಂಡಲ್ ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಕನ್ನಡದಲ್ಲಿ ನನಗೆ ಗೊತ್ತಿರುವಂತಹ ನಟರು, ಸ್ಟಾರ್ ನಟರು ಯಾರು ಕೂಡ ಇಂಥದ್ದನ್ನು ಮಾಡಲ್ಲ. ಅಂತಹ ಉದಾಹರಣೆ ಇಲ್ಲ. ಆದರೆ, ಯುವ ನಟ-ನಟಿಯರು, ಇದ್ದಕ್ಕಿದ್ದಂತೆ ಪ್ರಚಾರ ಗಳಿಸಿದವರು ಈ ಥರದ ರೇವ್ ಪಾರ್ಟಿಗಳಲ್ಲಿ ಸೇರುತ್ತಾರೆ ಎಂದು ನಾನು ಕೂಡ ಕೇಳಿದ್ದೇನೆ. ನನಗೂ ಹಲವಾರು ಘಟನೆಗಳು ಗೊತ್ತಿವೆ. ನನಗೆ ಭದ್ರತೆ ನೀಡಿದರೆ, ಈ ಬಗ್ಗೆ ಹೇಳಬಹುದು. ಅದರಲ್ಲೂ ನಟಿಯರು ಹೆಚ್ಚಾಗಿ ಇದರಲ್ಲಿ ಇದ್ದಾರೆ ಎಂದು ಮಾಧ್ಯಮಗಳಿಗೆ ಇಂದ್ರಜಿತ್ ಲಂಕೇಶ್ ಹೇಳಿಕೆ ನೀಡಿದ್ದರು.
ನಟ ಸುಶಾಂತ್ ಸಿಂಗ್ ಕೊಲೆಯಾಗಿದೆ !
ಮುಂಬೈ, ಆ. 29: ನಟ ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಕೂಪರ್ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ನೀಡಿರುವ ಹೇಳಿಕೆ ಬಾಲಿವುಡ್ನಲ್ಲಿ ಸಂಚಲನ ಸೃಷ್ಟಿಸಿದೆ. ಸುಶಾಂತ್ ಸಿಂಗ್ ಪಾರ್ಥೀವ ಶರೀರವನ್ನು ಆಸ್ಪತ್ರೆಗೆ ತಂದಾಗ ಅವರ ಕಾಲು ಮುರಿದಿತ್ತು, ದೇಹದ ಮೇಲೆ ಗಾಯದ ಗುರುತುಗಳಿತ್ತು. ಅದು ಕೊಲೆ ಅಂತಾ ವೈದ್ಯರು ಹೇಳುತ್ತಿದ್ದನ್ನು ಕೇಳಿದ್ದಾಗಿ ಆಸ್ಪತ್ರೆ ಸಿಬ್ಬಂದಿ ಹೇಳಿಕೆ ನೀಡಿದ್ದು, ಈ ವೀಡಿಯೋವನ್ನು ಸುಶಾಂತ್ ರಜಪೂತ್ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸುಶಾಂತ್ ಸಿಂಗ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದ ಹಿರಿಯ ವೈದ್ಯರು ಅದು ಕೊಲೆ ಅಂತಾ ಹೇಳಿದರು. ಆದರೆ, ಪೆÇಲೀಸರು ಆತ್ಮಹತ್ಯೆ ಅಂತಾ ಘೋಷಿಸಿದ್ದಾರೆ. ಕಾಲುಗಳನ್ನು ಮುರಿದಿರುವುದನ್ನು ಡಾಕ್ಟರ್ ಕೂಡಾ ಒಪ್ಪಿಕೊಂಡಿದ್ದಾರೆ, ಆದರೆ, ಕೇಸ್ನಲ್ಲಿ ಅದನ್ನು ಬಿಂಬಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.