ಮಡಿಕೇರಿ, ಆ. 28: ಜಿಲ್ಲೆಯಲ್ಲಿ ಈ ದಿನ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಪ್ರಕರಣಗಳ ಒಟ್ಟು ಸಂಖ್ಯೆ 19 ಕ್ಕೇರಿದೆ.

ಮಡಿಕೇರಿ ನಗರದ ಗಣಪತಿ ಬೀದಿ ನಿವಾಸಿ 53 ವರ್ಷದ ಪುರುಷರೊಬ್ಬರು ಹಿಂದಿನಿಂದಲೂ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಪಾಶ್ರ್ವವಾಯುವಿನಿಂದ ಬಳಲುತ್ತಿದ್ದರು. ಇವರು ವಾಸಿಸುತ್ತಿದ್ದ ಪ್ರದೇಶವು ನಿಯಂತ್ರಿತ ಪ್ರದೇಶದಲ್ಲಿ ಬಂದಿದ್ದರಿಂದ ತಾ.24ರಂದು ಇವರಿಗೆ ರ್ಯಾಪಿಡ್ ಆಂಟಿಜೆನ್ ಕಿಟ್ ಮೂಲಕ ಕೋವಿಡ್ ಪರೀಕ್ಷೆ ನಡೆಸಿದ್ದು, ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿತ್ತು.

ತಾ.25ರಂದು ಇವರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು, ಇವರು ಪಾಶ್ರ್ವವಾಯು ಕಾಯಿಲೆ ಯಿಂದ ಬಳಲುತ್ತಿದ್ದರಿಂದ ಐ.ಸಿ.ಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತಾ.28ರ ರಾತ್ರಿ 7.10ಕ್ಕೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುತ್ತಾರೆ.

ಮೃತ ದೇಹದ ಅಂತ್ಯಕ್ರಿಯೆ ಯನ್ನು ಸರ್ಕಾರದ ಕೋವಿಡ್ ಮಾರ್ಗಸೂಚಿಯಂತೆ ನಡೆಸಲಾಯಿತು.

ಜಿಲ್ಲೆಯಲ್ಲಿ ಹೊಸದಾಗಿ 53 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1342 ಪ್ರಕರಣಗಳು ವರದಿಯಾಗಿದ್ದು, 1098 ಮಂದಿ ಗುಣಮುಖರಾಗಿದ್ದಾರೆ. 225 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ 96 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 55 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 75 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 250 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿಯ ಕುಂದಚೇರಿ ಗ್ರಾಮದ ಚೆಟ್ಟಿಮಾನಿಯ ಪಂಚಾಯತ್ ಕಚೇರಿ ಬಳಿಯ 19 ವರ್ಷದ ಮಹಿಳೆ, 6 ವರ್ಷದ ಬಾಲಕ ಮತ್ತು 30 ವರ್ಷದ ಪುರುಷ, ಮಡಿಕೇರಿ ಹಾಕತ್ತೂರು ಗ್ರಾಮದ ಹರತಾಳ ರಸ್ತೆಯ 73 ವರ್ಷದ ಪುರುಷ, ತೊಂಬತ್ತುಮನೆಯ 16, 9 ವರ್ಷದ ಬಾಲಕರು, 6 ವರ್ಷದ ಬಾಲಕಿ, 13 ವರ್ಷದ ಬಾಲಕ, 73, 41 ಮತ್ತು 34 ವರ್ಷದ ಮಹಿಳೆಯರು, ಮೂರ್ನಾಡು ಅಂಚೆಯ ಕಾಂತೂರು ಗ್ರಾಮದ 53 ವರ್ಷದ ಮಹಿಳೆ, ಸುಂಟಿಕೊಪ್ಪ ಚೆಟ್ಟಳ್ಳಿ ರಸ್ತೆಯ ಶ್ರೀದೇವಿ ಲೇಔಟಿನ 22 ಮತ್ತು 65 ವರ್ಷದ ಮಹಿಳೆಯರು, ಮಡಿಕೇರಿ ಹಾಕತ್ತೂರಿನ ಚೂರಿಕಾಡುವಿನ 46 ವರ್ಷದ ಪುರುಷ, ಕುಶಾಲನಗರ ಮಾರ್ಕೆಟ್ ರಸ್ತೆಯ 34 ವರ್ಷದ ಮಹಿಳೆ, ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 70 ಮತ್ತು 35 ವರ್ಷದ ಪುರುಷರು, ಮಡಿಕೇರಿ ಅಶೋಕಪುರಂನ ಬ್ಲಾಕ್ ನಂಬರ್ 19ರ 45 ವರ್ಷದ ಪುರುಷ, ಹಾಸನದ ಅರಕಲಗೂಡುವಿನ 55 ವರ್ಷದ ಪುರುಷ, ಗೋಣಿಕೊಪ್ಪ ಸೀಗೆತೋಡುವಿನ 33 ವರ್ಷದ ಪುರುಷ.

ಕುಶಾಲನಗರ ಗುಮ್ಮನಕೊಲ್ಲಿಯ 27 ವರ್ಷದ ಪುರುಷ, ಸೋಮವಾರಪೇಟೆ ಹಾನಗಲ್ ಅಂಚೆಯ ಕಲ್ಕಂದೂರಿನ 53 ವರ್ಷದ ಪುರುಷ, ಸೋಮವಾರಪೇಟೆ ತೋಳೂರುಶೆಟ್ಟಳ್ಳಿಯ ದೊಡ್ಡಮನೆ ಕೊಪ್ಪದ 47 ವರ್ಷದ ಮಹಿಳೆ, ಮಡಿಕೇರಿ ರಿಮಾಂಡ್ ಹೋಮ್ ಬಳಿಯ 53 ವರ್ಷದ ಮಹಿಳೆ, ಮಡಿಕೇರಿ ರಾಘವೇಂದ್ರ ದೇವಾಲಯ ಬಳಿಯ 55 ವರ್ಷದ ಮಹಿಳೆ, ಸೋಮವಾರಪೇಟೆ 7ನೇ ಹೊಸಕೋಟೆ ಜಂಕ್ಷನ್ನಿನ 67 ವರ್ಷದ ಪುರುಷ, ನೆಲ್ಲಿಹುದಿಕೇರಿಯ ಬರಡಿ ಗ್ರಾಮದ 67 ವರ್ಷದ ಪುರುಷ, ಮಡಿಕೇರಿ ಕೂಟುಹೊಳೆ 1ನೇ ಮೊಣ್ಣಂಗೇರಿಯ 69 ವರ್ಷದ ಪುರುಷ, ಮಡಿಕೇರಿ ಪೆÇಲೀಸ್ ವಸತಿ ಗೃಹದ 35 ವರ್ಷದ ಪುರುಷ, ಮಡಿಕೇರಿ ಇಗ್ಗುತಪ್ಪ ಬಡಾವಣೆಯ 45 ವರ್ಷದ ಪುರುಷ, ಮಡಿಕೇರಿಯ ಮೈತ್ರಿ ಹಾಲ್ ವಸತಿಗೃಹ ಬಳಿಯ 36 ವರ್ಷದ ಪುರುಷ.

ಪೆÇನ್ನಂಪೇಟೆ ಕಿರುಗೂರು ಅಂಚೆಯ 41 ವರ್ಷದ ಪುರುಷ. ಗೋಣಿಕೊಪ್ಪ ಅರವತ್ತೊಕ್ಲುವಿನ ಪಿ.ಎಚ್.ಸಿ ಕಾಲೋನಿಯ 49 ವರ್ಷದ ಪುರುಷ. ವಿರಾಜಪೇಟೆ ಐಮಂಗಲದ 17 ವರ್ಷದ ಬಾಲಕಿ, 53 ವರ್ಷದ ಮಹಿಳೆ ಮತ್ತು 58 ವರ್ಷದ ಪುರುಷ.

ವೀರಾಜಪೇಟೆ ನೆಹರೂ ನಗರ ಮಸೀದಿ ಬಳಿಯ 22 ವರ್ಷದ ಮಹಿಳೆ, ಗೋಣಿಕೊಪ್ಪ ನೇತಾಜಿ ಲೇಔಟಿನ 41 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆಯ ಸರ್ಕಾರಿ ಶಾಲೆ ಎದುರಿನ 25 ವರ್ಷದ ಮಹಿಳೆ, ವೀರಾಜಪೇಟೆ ಕಾಕೋಟುಪರಂಬು ಅಂಚೆಯ ನಾಲ್ಕೇರಿ ಗ್ರಾಮದ 42 ವರ್ಷದ ಪುರುಷ, ವೀರಾಜಪೇಟೆ ನೆಹರೂ ನಗರದ 28 ಮತ್ತು 30 ವರ್ಷದ ಮಹಿಳೆಯರು, ವೀರಾಜಪೇಟೆ ಕಾವಡಿ ಗ್ರಾಮ ಮತ್ತು ಅಂಚೆಯ 26 ವರ್ಷದ ಮಹಿಳೆ, ಪೆÇನ್ನಂಪೇಟೆ ಕಾವೇರಿ ನಗರದ 48 ವರ್ಷದ ಪುರುಷ, ವೀರಾಜಪೇಟೆ ಧನುಗಾಲ ಅಂಚೆಯ ಕೋಣನ ಕಟ್ಟೆಯ 26 ವರ್ಷದ ಪುರುಷ, ಗೋಣಿಕೊಪ್ಪ ಕುಂದ ರಸ್ತೆಯ 26 ವರ್ಷದ ಪುರುಷ, ಕುಶಾಲನಗರ ಬೈಚನಹಳ್ಳಿಯ ಜಾತ್ರಾ ಮೈದಾನ ಬಳಿಯ 55 ವರ್ಷದ ಮಹಿಳೆ.

ಸೋಮವಾರಪೇಟೆ ಶಿರಂಗಾಲದ ಕಾಡ ಬಸವೇಶ್ವರ ದೇವಾಲಯ ಬಳಿಯ 59 ವರ್ಷದ ಪುರುಷ, ಮಡಿಕೇರಿ ನೀರುಕೊಲ್ಲಿಯ ಸಿದ್ದಪ್ಪಾಜಿ ದೇವಾಲಯ ಬಳಿಯ 28 ವರ್ಷದ ಪುರುಷ, 44 ವರ್ಷದ ಮಹಿಳೆ ಮತ್ತು 48 ವರ್ಷದ ಪುರುಷ. ಪೆÇನ್ನಂಪೇಟೆ ಪೆÇಲೀಸ್ ವಸತಿ ಗೃಹದ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.