ಸೋಮವಾರಪೇಟೆ, ಆ. 27: ಸಮೀಪದ ಕುಂಬೂರು ಗ್ರಾಮದ ಯುವತಿಯೋರ್ವಳು ನಾಪತ್ತೆಯಾಗಿರುವ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಬೂರು ಗ್ರಾಮದ ಸೌಮ್ಯ ಎಂಬಾಕೆ ತಾ. 21 ರಂದು ಬೆಳಿಗ್ಗೆ 11 ಗಂಟೆಗೆ ಮನೆಯಿಂದ ಪಕ್ಕದ ಮನೆಗೆ ಹೋಗಿ ಬರುತ್ತೇನೆ ಎಂದು ತೆರಳಿದವಳು ನಂತರ ವಾಪಾಸ್ ಮನೆಗೆ ಬಂದಿಲ್ಲ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ವಯಸ್ಸು 24, 5.3 ಅಡಿ ಎತ್ತರ, ಎಣ್ಣೆಗೆಂಪು ಬಣ್ಣ, ಕನ್ನಡ, ಇಂಗ್ಲೀಷ್, ತುಳು ಮಾತನಾಡುತ್ತಾಳೆ. ಪತ್ತೆಯಾದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ (ದೂ. 08276-282040)ಗೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.