ಮಡಿಕೇರಿ, ಆ. 27: 66/11 ಕೆ.ವಿ. ಪೊನ್ನಂಪೇಟೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಹೋಗುವ ಎಫ್ 6-ಹುದಿಕೇರಿ, ಎಫ್ 7 ಗೋಣಿಕೊಪ್ಪಲು, ಎಫ್ 5-ಪಾಲಿಬೆಟ್ಟ, ಎಫ್ 9-ಹಾತೂರು ಮತ್ತು ಎಫ್ 10-ಹೈಸೊಡ್ಲೂರು ಫೀಡರ್‍ಗಳಲ್ಲಿ ತಾ. 28 ರಂದು (ಇಂದು) ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಾಗೂ 33/11 ಕೆ.ವಿ ಶ್ರೀಮಂಗಲ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣೆ ಮತ್ತು ದುರಸ್ಥಿ ಕಾರ್ಯವನ್ನು ಕೈಗೊಳ್ಳಬೇಕಾಗಿರುವುದರಿಂದ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಬೇಗೂರು, ಅರುವತ್ತೋಕ್ಲು, ಕೈಕೇರಿ, ಗೋಣಿಕೊಪ್ಪಲು, ಹಾತ್ತೂರು, ಶ್ರೀಮಂಗಲ, ಬಿರುನಾಣಿ, ಕುಟ್ಟ ನಾಲ್ಕೇರಿ, ಕುರ್ಚಿ ಬೀರುಗ ಹಾಗೂ ಸುತ್ತಮುತ್ತಲವ್ಯಾಪ್ತಿಯ ಪ್ರದೇಶಗಳಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ಸೆಸ್ಕ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.