ಪೆÇನ್ನಂಪೇಟೆ, ಆ. 27: ರಾಜಕಾರಣಿ, ಹಿರಿಯ ನ್ಯಾಯವಾದಿ ದಿ. ಎ.ಕೆ. ಸುಬ್ಬಯ್ಯ ಅವರು ನಿಧನರಾಗಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರದಂದು ಪ್ರಥಮ ವರ್ಷದ ಸ್ಮರಣಾ ದಿನವನ್ನು ಆಚರಿಸಲಾಯಿತು. ಸುಬ್ಬಯ್ಯ ಅವರ ತೋಟ ಹುದಿಕೇರಿ ಸಮೀಪದ ಕೋಣಗೇರಿ ಗ್ರಾಮದಲ್ಲಿರುವ ಕಲ್ಲುಗುಂಡಿ ಎಸ್ಟೇಟಿನ ತಮ್ಮ ಪಿತ್ರಾರ್ಜಿತ ಜಾಗದಲ್ಲಿನ ಅವರ ಪತ್ನಿ ಡಾಟಿ ಪೆÇನ್ನಮ್ಮ ಅವರ ಸಮಾಧಿ ಪಕ್ಕದಲ್ಲೇ ಇರುವ ಸುಬ್ಬಯ್ಯ ಅವರ ಸಮಾಧಿಗೆ ನೂತನವಾಗಿ ನಿರ್ಮಿಸಿದ್ದ ಶಿಲಾ ಸ್ಮಾರಕವನ್ನು ಅನಾವರಣ ಮಾಡಲಾಯಿತು. (ಮೊದಲ ಪುಟದಿಂದ) ಆರಂಭದಲ್ಲಿ ಸುಬ್ಬಯ್ಯ ಅವರ ಮಕ್ಕಳು, ಸೊಸೆಯಂದಿರು ಹಾಗೂ ಕುಟುಂಬಸ್ಥರು ಶಿಲಾ ಸ್ಮಾರಕಕ್ಕೆ ಪೂಜೆ ಸಲ್ಲಿಸಿ ನಮನ ಅರ್ಪಿಸಿದರು. ಬಳಿಕ ಹಿರಿಯ ವಿದ್ವಾಂಸರಾದ ಡಾ. ರಾಮಚಂದ್ರಪ್ಪ ಟಿ. ಬೇಗೂರ್ ಅವರು ಪುಷ್ಪಗುಚ್ಛವಿರಿಸಿ ನಮನ ಸಲ್ಲಿಸಿದರು. ನಂತರ ಸಾಲಿನಲ್ಲಿ ನಿಂತಿದ್ದ ಸುಬ್ಬಯ್ಯ ಅವರ ಅಭಿಮಾನಿಗಳು ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ಸುಬ್ಬಯ್ಯ ಅವರ ಪುತ್ರರಾದ ನರೇನ್ ಕಾರ್ಯಪ್ಪ, ರವಿ ಸೋಮಯ್ಯ, ದಿನು ಪೂವಪ್ಪ, ಪೆÇನ್ನಣ್ಣ ಮತ್ತು ಮುತ್ತಣ್ಣ, ಸೊಸೆಯಂದಿರಾದ ಚಂದಲೆ ಕಾರ್ಯಪ್ಪ, ಕಾಂಚನ ಪೊನ್ನಣ್ಣ, ಡಾ. ನಯನ ಸೋಮಯ್ಯ ಇತರರಿದ್ದರು. ಸುಬ್ಬಯ್ಯ ಅವರು ಅತೀವವಾಗಿ ಮೈಗೂಡಿಸಿಕೊಂಡಿದ್ದ ‘ಧೈರ್ಯ’, ‘ದೃಢ ನಂಬಿಕೆ’ ಮತ್ತು ‘ಸಹಾನುಭೂತಿ’ ಎಂಬ ಪದವನ್ನು ಶಿಲಾ ಸ್ಮಾರಕದ ಮುಂಭಾಗದಲ್ಲಿ ವಿಶೇಷವಾಗಿ ಕೆತ್ತಿಸಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಸಂಚಾಲಕರಾದ ಕೆ. ಎನ್. ಅಶೋಕ್, ಹಿರಿಯ ವಿಚಾರವಾದಿ ಶಿವಸುಂದರ್, ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ. ಎಂ.ಎ.) ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ, ಕರ್ನಾಟಕ ಜನಶಕ್ತಿ ಸಂಘಟನೆಯ ಅನನ್ಯ ಶಿವಕುಮಾರ್, ಬ್ಲೂ ಡಾರ್ಟ್ ಸಂಸ್ಥೆಯ ಉಪಾಧ್ಯಕ್ಷ ಬಾಳೆಯಡ ಕಾಳಪ್ಪ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕರಾದ ಕಿರಿಯಮಾಡ ಭೀಮಯ್ಯ, ಪೆÇಲೀಸ್ ಅಧಿಕಾರಿ ಗೋಪಾಲ್ ನಾಯಕ್, ಜಿ.ಪಂ. ಸದಸ್ಯರಾದ ಮುಕ್ಕಾಟಿರ ಶಿವು ಮಾದಪ್ಪ, ಬಿ.ಎನ್. ಪ್ರಥ್ಯು, ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ, ಸೇರಿದಂತೆ ಅಭಿಮಾನಿಗಳು, ವಕೀಲರು ಕುಟುಂಬಸ್ಥರು ಮತ್ತು ಸುಬ್ಬಯ್ಯ ಅವರ ಬಂಧುವರ್ಗ ಪಾಲ್ಗೊಂಡಿದ್ದರು.

ಮಡಿಕೇರಿ ಕಾರ್ಯಕ್ರಮ

ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದ ವತಿಯಿಂದ ಮಡಿಕೇರಿಯ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಸುಬ್ಬಯ್ಯ ಅವರ ಮೊದಲ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಸುಬ್ಬಯ್ಯ ಅವರ ಒಡನಾಡಿ ಚಕ್ಕೇರ ಸೋಮಯ್ಯ ಪಾಲ್ಗೊಂಡು ಮಾತನಾಡಿದರು.

ತನ್ನನ್ನು ನಂಬಿದವರಿಗಾಗಿ ಮುನ್ನುಗ್ಗಿ ಹೋರಾಟ ನಡೆಸುತ್ತಿದ್ದ ಸುಬ್ಬಯ್ಯ ಅವರ ತತ್ವ ಸಿದ್ಧಾಂತಗಳನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅವರ ಹೆಸರಿನಲ್ಲಿ ಪ್ರತಿಷ್ಠಾನವನ್ನು ಆರಂಭಿಸುತ್ತಿರುವುದು ಶ್ಲಾಘನೀಯವೆಂದರು.

ವಿಚಾರವಾದಿ ಸುಳ್ಯದ ಹಿಮಕರ್ ಮಾತನಾಡಿ, ಜನಪರ ಕಾಳಜಿಯನ್ನು ಹೊಂದಿದ್ದ ಎ.ಕೆ. ಸುಬ್ಬಯ್ಯ ಅವರು ಸಾಮಾಜಿಕ ಕಳಕಳಿಯೊಂದಿಗೆ ಹೋರಾಟ ನಡೆಸುತ್ತಿದ್ದ ಅಪರೂಪದ ವ್ಯಕ್ತಿ ಎಂದು ಬಣ್ಣಿಸಿದರು.

ಜನಪರ ಹೋರಾಟಗಾರ, ಚಿಂತಕÀ ಕಂದಕಲ್ ಶ್ರೀನಿವಾಸ್ ಮಾತನಾಡಿ, ಸುಬ್ಬಯ್ಯ ಅವರ ಜನಪರ ಚಿಂತನೆಗಳು ಇಂದಿಗೂ ಪ್ರಸ್ತುತ ಎಂದರು.

ದಿಡ್ಡಳ್ಳಿ ಹೋರಾಟಗಾರ್ತಿ ಅನಿತ ಮಾತನಾಡಿ, ದಿಡ್ಡಳ್ಳಿ ಹೋರಾಟದ ಸಂದರ್ಭ ಅನೇಕ ಮಂದಿ ಬೀದಿ ಪಾಲಾಗಿದ್ದರು, ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ಬಂದ ಸುಬ್ಬಯ್ಯ ಅವರ ಹೋರಾಟದ ಫಲವಾಗಿ ಇಂದು ನೆಲೆ ದೊರೆತಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಎ.ಕೆ. ಸುಬ್ಬಯ್ಯ ಅಭಿಮಾನಿ ಬಳಗದ ಪ್ರಮುಖ ವಿ.ಪಿ. ಶಶಿಧರ್ ಅವರು ಎಕೆಎಸ್ ತುಳಿತಕ್ಕೊಳಗಾದವರ ಶಕ್ತಿಯಾಗಿದ್ದರು. ಅವರ ಜೀವನ ಮುಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು.

‘ಎ.ಕೆ. ಸುಬ್ಬಯ್ಯ ಪ್ರತಿಷ್ಠಾನ’ವನ್ನು ಅಸ್ತಿತ್ವಕ್ಕೆ ತರುತ್ತಿದ್ದು, ಅದರ ಮೂಲಕ ವರ್ಷಂಪ್ರತಿ ಸ್ಮರಣೆ ಕಾರ್ಯಕ್ರಮವನ್ನು ರೂಪಿಸುವುದಾಗಿ ತಿಳಿಸಿದರು.

ಸಭಾ ಕಾರ್ಯಕ್ರಮದ ನಂತರ ವಿಚಾರವಾದಿ ಡಾ. ಶಿವಸುಂದರ ಅವರಿಂದ ‘ಪ್ರಸಕ್ತ ಭಾರತದ ಪ್ರಜಾಸತ್ತೆಯ ಸವಾಲುಗಳು’ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಿತು.

ಕೋಮು ಸೌಹಾರ್ದ ವೇದಿಕೆಯ ಪ್ರಮುಖರಾದ ಕೆ.ಎನ್. ಅಶೋಕ್, ಹಫೀಸ್ ಖಾನ್, ಸಮಾಜಿಕ ಹೋರಾಟಗಾರ ಡಿ. ನಿರ್ವಾಣಪ್ಪ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುರಯ್ಯ ಅಬ್ರಾರ್, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್, ರಾಜ್ಯ ಸದಸ್ಯ ಅಮೀನ್ ಮೊಹಿಸಿನ್ ಮತ್ತಿತರ ಪ್ರಗತಿಪರ ಚಿಂತಕರು, ಹೋರಾಟಗಾರರು ಹಾಗೂ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಜಿ.ಪಂ ಮಾಜಿ ಅಧ್ಯಕ್ಷರಾದ ದೀರ್ಘಕೇಶಿ ಶಿವಣ್ಣ ಸ್ವಾಗತಿಸಿ, ಅಭಿಮಾನಿ ಬಳಗದ ತೆನ್ನಿರಾ ಮೈನಾ ನಿರೂಪಿಸಿದರು, ಮನು ಶೆಣೈ ವಂದಿಸಿದರು.