ಸಿದ್ದಾಪುರ, ಆ. 26: ಜಿಲ್ಲೆಯ ವಿವಿಧ ಭಾಗದ ನೆರೆ ಸಂತ್ರಸ್ತ ಕುಟುಂಬಗಳಿಗೆ ಕಾಂಗ್ರೆಸ್ ಮುಖಂಡ ಕದ್ದಣಿಯಂಡ ಹರೀಶ್ ಬೋಪಣ್ಣ ಆರ್ಥಿಕ ನೆರವು ನೀಡಿದರು. ಜಿಲ್ಲೆಯ ನಾಪೋಕ್ಲು, ಪಾರಾಣೆ, ಎಮ್ಮೆಮಾಡು, ಸಿದ್ದಾಪುರ, ಕೊಂಡಂಗೇರಿ ಭಾಗದಲ್ಲಿ ಈ ಬಾರಿಯ ಮಹಾಮಳೆಗೆ ಸಿಲುಕಿ ಮನೆಗಳಿಗೆ ಹಾನಿಗೊಳಗಾದ ಕುಟುಂಬಗಳನ್ನು ಗುರುತಿಸಿ ಅವರುಗಳಿಗೆ ಆರ್ಥಿಕ ನೆರವು ನೀಡಿದ್ದಾರೆ. ಒಟ್ಟು ರೂ. 2.50 ಲಕ್ಷ ನಗದು ಹಣವನ್ನು ವೈಯಕ್ತಿಕವಾಗಿ ಹರೀಶ್ ಬೋಪಣ್ಣನವರು ನೀಡಿ ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ನೆರವು ನೀಡುವ ಮೂಲಕ ಸ್ಪಂದಿಸಿದ್ದಾರೆ. ಇದಲ್ಲದೆ ವಿವಿಧ ಗ್ರಾಮಗಳಲ್ಲಿ ಕೊರೊನಾ ವೈರಸ್ ಪತ್ತೆಯಾದ ಭಾಗದಲ್ಲಿ ಸೀಲ್ಡೌನ್ ಆದ ಪ್ರದೇಶದ ನಿವಾಸಿಗಳಿಗೆ ಅಗತ್ಯ ಆಹಾರದ ಕಿಟ್ಗಳನ್ನು ವಿತರಣೆ ಮಾಡಿದ್ದಾರೆ. ಈ ಸಂದರ್ಭ ವಿವಿಧ ಗ್ರಾಮಗಳ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರು ಹಾಜರಿದ್ದರು.