ಮಡಿಕೇರಿ: ದೇಶದ ಯುವ ಸಮೂಹಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಶಕ್ತಿ ತುಂಬಿದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಆದರ್ಶಗಳು ಇಂದಿಗೂ ಜೀವಂತವೆಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್.ಪಿ. ಹನೀಫ್ ಹೇಳಿದ್ದಾರೆ.
ನಗರದಲ್ಲಿ ಯುವ ಕಾಂಗ್ರೆಸ್ ವತಿಯಿಂದ ನಡೆದ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಯುವ ಪ್ರಧಾನ ಕಾರ್ಯದರ್ಶಿ ಶಾಫಿ ಕೊಟ್ಟಮುಡಿ, ನಾಪೋಕ್ಲು ಬ್ಲಾಕ್ ಯುವ ಅಧ್ಯಕ್ಷ ಸುದೈ ನಾಣಯ್ಯ, ಮಡಿಕೇರಿ ಬ್ಲಾಕ್ ಯುವ ಅಧ್ಯಕ್ಷ ರವಿ ನಾಪಂಡ, ಮಡಿಕೇರಿ ನಗರ ಯುವ ಅಧ್ಯಕ್ಷ ಸದಾ ಮುದ್ದಪ್ಪ, ವೀರಾಜಪೇಟೆ ವಿಧಾನಸಭಾ ಯುವ ಕಾರ್ಯದರ್ಶಿ ಸಿರಾಜ್ ಪರವಂಡ, ಸಾಮಾಜಿಕ ಜಾಲತಾಣದ ಜಿಲ್ಲಾಧ್ಯಕ್ಷ ಸೂರಜ್ ಹೊಸೂರು, ರಾಹುಲ್, ಜಿಯೋ, ಅನಿಲ್ ಯಾದವ್, ಮುದ್ದುರಾಜ್, ಡಿಸಿಸಿ ಸದಸ್ಯ ಬಾಲಚಂದ್ರ ನಾಯರ್ ಮತ್ತಿತರರು ಉಪಸ್ಥಿತರಿದ್ದರು.ವೀರಾಜಪೇಟೆ: ಮಾಜಿ ಪ್ರಧಾನಿ ದಿ. ರಾಜೀವ್ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿ:ದೇವರಾಜ ಅರಸ್ ಅವರ ಜನ್ಮ ದಿನವನ್ನು ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಚರಿಸಲಾಯಿತು.
ಇಲ್ಲಿನ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ರಸ್ತೆಯಲ್ಲಿರುವ ಗಣಪತಿ ಆರ್ಕೇಡ್ನ ಸಭಾಂಗಣದಲ್ಲಿ ನಡೆದ ಜನ್ಮ ದಿನಾಚರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಜ್ಯೋತಿ ಬೆಳಗಿಸಿ ಇಬ್ಬರ ಛಾಯಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸ್ಮರಿಸಿದರು.
ಈ ಸಂದರ್ಭ ಮಾಜಿ ಮುಖ್ಯಮಂತ್ರಿ ದಿ. ದೇವರಾಜ್ ಅರಸ್ ಅವರ ಆಡಳಿತದಲ್ಲಿ ಭೂ ಸುಧಾರಣಾ ಕಾಯ್ದೆಯಿಂದ ರೈತರಿಗಾದ ಅನುಕೂಲತೆಗಳನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ವಿವರಿಸಿದರು. ವಿಧಾನ ಪರಿಷತ್ನ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ದೇಶಕ್ಕಾಗಿ ಸಲ್ಲಿಸಿದ ಸೇವೆ, ತ್ಯಾಗವನ್ನು ಸ್ಮರಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪೊನ್ನಂಪೇಟೆ ಬ್ಲಾಕ್ನ ನವೀನ್, ಕೆ.ಪಿ.ಸಿ.ಸಿ. ಸದಸ್ಯೆ ತಾರಾ ಅಯ್ಯಮ್ಮ, ಜಿಲ್ಲಾ ಹಿಂದುಳಿದ ಘಟಕದ ಸ.ರ. ಚಂಗಪ್ಪ, ಕಿಸಾನ್ ಘಟಕದ ರಾಜ್ಯ ಸಮಿತಿಯ ಕೆ.ಎಸ್. ಗೋಪಾಲಕೃಷ್ಣ, ಜಿಲ್ಲಾ ಎಸ್.ಸಿ. ಘಟಕದ ಅಧ್ಯಕ್ಷ ವಿ.ಕೆ. ಸತೀಶ್ಕುಮಾರ್, ನಗರ ಸಮಿತಿ ಅಧ್ಯಕ್ಷ ಜಿ.ಜಿ. ಮೋಹನ್, ಕಾರ್ಯದರ್ಶಿ ಎಂ.ಎಂ. ಶಶಿಧರನ್, ಮಹಿಳಾ ಘಟಕದ ಅಧ್ಯಕ್ಷೆ ಪೊನ್ನಕ್ಕಿ, ಪಟ್ಟಣ ಪಂಚಾಯಿತಿ ಸದಸ್ಯ ಮಹಮ್ಮದ್ ರಾಫಿ ಮತ್ತಿತರರು ಹಾಜರಿದ್ದರು.ಮಡಿಕೇರಿ: ತಮ್ಮ ದೂರದೃಷ್ಟಿತ್ವದ ಕಾರ್ಯಕ್ರಮಗಳಿಂದ ಶೋಷಿತ ವರ್ಗದ ಜನರಿಗೆ ನೈತಿಕ ಬಲವನ್ನು ತುಂಬುವಲ್ಲಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಯಶಸ್ವಿಯಾಗಿದ್ದರು ಎಂದು ಕೊಡಗು ಜಿಲ್ಲಾ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಜಿಲ್ಲಾ ಸಹಮತ ವೇದಿಕೆ ಮತ್ತು ಅಹಿಂದ ಒಕ್ಕೂಟದ ಜಂಟಿ ಆಶ್ರಯದಲ್ಲಿ ನಡೆದ ಅರಸು ಅವರ 105ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಕ್ಕೂಟದ ಜಿಲ್ಲಾಧ್ಯಕ್ಷ ಟಿ.ಎಂ. ಮುದ್ದಯ್ಯ, ಸಹಮತ ವೇದಿಕೆಯ ಉಪಾಧ್ಯಕ್ಷ ಕೆ.ಟಿ. ಬೇಬಿ ಮ್ಯಾಥ್ಯು, ಪ್ರಮುಖರಾದ ಮುತ್ತಪ್ಪ, ದಿನೇಶ್, ದೇವಾಂಗ ಸಮಾಜದ ಟಿ.ಕೆ. ಪಾಂಡುರಂಗ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಮೋಹನ್, ಬಿಲ್ಲವ ಸಮಾಜದ ಅಪ್ರು ರವೀಂದ್ರ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮಿನಾಜ್ ಪ್ರವೀಣ್, ಮೂಡ ಮಾಜಿ ಅಧ್ಯಕ್ಷ ಚುಮ್ಮಿ ದೇವಯ್ಯ, ಕಾಂಗ್ರೆಸ್ ಪದಾಧಿಕಾರಿಗಳಾದ ಉಸ್ಮಾನ್, ಟಿ.ಕೆ. ಸಾಯಿಕುಮಾರ್, ಸ.ರಾ. ಚಂಗಪ್ಪ, ಆರ್.ಪಿ. ಚಂದ್ರಶೇಖರ್, ಚೇಂಬರ್ ಆಫ್ ಕಾಮರ್ಸ್ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್ ಕುಶಾಲಪ್ಪ, ನಗರಸಭಾ ಮಾಜಿ ಸದಸ್ಯ ಪ್ರಕಾಶ್ ಆಚಾರ್ಯ ಮತ್ತಿತರರು ಹಾಜರಿದ್ದರು.