ವೀರಾಜಪೇಟೆ, ಆ. 26: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಎಲ್ಲಾ ವರ್ಗದ ಜನರಿಗೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದು ಇನ್ನೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕರಾದ ಡಾ. ಯೋಗೇಶ್ ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದÀ ಉಪಾಧ್ಯಾಯರ ಸಂಘದ ಸಭಾಂಗಣದಲ್ಲಿ ಆಯೋಜಿಸ ಲಾಗಿದ್ದ ಜ್ಞಾನ ವಿಕಾಸ ಕೇಂದ್ರಗಳ ಸಂಯೋಜಕರಿಗೆ ಮಹಿಳೆಯರ ಸಬಲೀಕರಣ ಪೂರಕವಾದ ಸರಕಾರಿ ಸೌಲಭ್ಯಗಳ ಮಹತ್ವದ ಬಗ್ಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಈಗಾಗಲೇ ಶಿಕ್ಷಣಕ್ಕೆ ಪೂರಕವಾಗಿ ಬಡ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ, ಶಿಷ್ಯಾ ವೇತನವನ್ನು 70 ಕುಟುಂಬಗಳಿಗೆ ವಿತರಿಸಲಾಗಿದೆ. 240 ದೇವಾಲಯಗಳಿಗೆ ಅನುದಾನದ ನೆರವು ನೀಡಲಾಗಿದೆ. ಅಳಿವಿನ ಅಂಚಿನಲ್ಲಿರುವ ಭತ್ತದ ಕೃಷಿಯನ್ನು ಯಂತ್ರ ಶ್ರೀಪದ್ಧತಿ ಮೂಲಕ ಯುವಪೀಳಿಗೆಗೆ ಅರಿವು ಮೂಡಿಸು ವುದರೊಂದಿಗೆ 55 ಕುಟುಂಬಗಳಿಗೆ 200 ಎಕರೆ ವಿಸ್ತರಣೆ ಹಾಗೂ ಕೃಷಿ ಚಟುವಟಿಕೆ ಬಗ್ಗೆ ರೈತರಿಗೆ ವಿವಿಧ ಸ್ವ-ಉದ್ಯೋಗಕ್ಕಾಗಿ ಅನುದಾನ ನೀಡಲಾಗಿದೆ ಎಂದರು.
ಸ್ವಯಂಸೇವಾ ಸಂಸ್ಥೆಯ ಟಿ.ಜೆ. ದಿವಾಕರ್ ಶೆಟ್ಟಿ ಮಾತನಾಡಿ, ಪರಿಸರ ಉತ್ತಮವಾಗಿರಲು ಪ್ಲಾಸ್ಟಿಕ್ ಮತ್ತು ಕಸದ ನಿರ್ಮೂಲನೆಗೆ ಪ್ರತಿಯೊಬ್ಬರು ಗಮನಹರಿಸಬೇಕು ಎಂದರು. ಯೋಜನಾಧಿಕಾರಿ ಸದಾಶಿವಗೌಡ ಮಾತನಾಡಿ, ವೀರಾಜಪೇಟೆ ತಾಲೂಕಿ ನಲ್ಲಿ ಕಳೆದ 12 ವರ್ಷಗಳಿಂದಲೂ 25 ಕೇಂದ್ರಗಳ 1,500 ಸದಸ್ಯರುಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕೋವಿಡ್ ಇರುವುದರಿಂದ ಕಳೆದ ಮೂರು ತಿಂಗಳಿಂದ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗಲಿಲ್ಲ. 2020-21ನೇ ಸಾಲಿಗೆ 100ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾಗಿದೆ ಎಂದರು.