ವೀರಾಜಪೇಟೆ, ಆ. 26: ಬಿಲ್ಲವ ಸೇವಾ ಸಮಾಜದಿಂದ ವರ್ಷಂಪ್ರತಿ ಆಚರಿಕೊಂಡು ಬರುತ್ತಿರುವ ಶ್ರಿ ನಾರಾಯಣಗುರು ಜಯಂತಿಯನ್ನು ಅಬ್ಬಂಟ್ಟಿ ಬಿಟ್ಟಂಗಾಲದಲ್ಲಿ ಸೆಪ್ಟೆಂಬರ್ 2 ರಂದು ನಡೆಸಲಾಗುವುದು ಎಂದು ತಾಲೂಕು ಅಧ್ಯಕ್ಷ ಬಿ.ಎಂ ಗಣೇಶ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಬಾರಿ ಕೋವಿಡ್ ಇರುವ ಕಾರಣ ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಇದೇ ಸಂದರ್ಭ ವೀರಾಜಪೇಟೆ ತಾಲೂಕಿನಲ್ಲಿ 2019-20ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಶೇ. 80 ಮೇಲ್ಪಟ್ಟು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ವಿದ್ಯಾರ್ಥಿಗಳು ಅಂಕಪಟ್ಟಿ ಪ್ರತಿಯನ್ನು ತಾ. 28 ರೊಳಗೆ ಅಧ್ಯಕ್ಷರು ಬಿ.ಎಂ. ಗಣೇಶ್ (9945526358) ಕಾರ್ಯದರ್ಶಿ ಜನಾರ್ಧನ (9611002998) ಇವರುಗಳಿಗೆ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಬಿ.ಎಸ್. ಜನಾರ್ಧನ್, ಖಜಾಂಚಿ ಬಿ.ಎಂ. ಸತೀಶ್, ನಿರ್ದೇಶಕ ನಾರಯನ್ ಉಪಸ್ಥಿತರಿದ್ದರು.