ಕುಶಾಲನಗರ, ಆ. 26: ಕುಶಾಲನಗರದಲ್ಲಿ ಪರಿಶಿಷ್ಟಜಾತಿ ಮತ್ತು ಪರಿಶಿಷÀ್ಟವರ್ಗದ ಕುಂದುಕೊರತೆ ಸಭೆ ನಡೆಯಿತು.

ಕುಶಾಲನಗರ ಠಾಣೆ ಆವರಣದಲ್ಲಿ ನಡೆದ ಸಭೆಯಲ್ಲಿ ಕುಶಾಲನಗರ ಪಟ್ಟಣದ ಟೌನ್ ಕಾಲೋನಿಯ ರಸ್ತೆಯನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಮನವಿ ಮಾಡಿದರು. ಬಹುತೇಕ ದಲಿತ ಕಾಲೋನಿಗಳಲ್ಲಿ ವಾಸಿಸುವ ಯುವಕರು ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಅಕ್ರಮ ಚಟುವಟಿಕೆಗಳು ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿರುವ ಕುರಿತಾಗಿ ಮಾತನಾಡಿದ ದಸಂಸ ಕೊಡಗು ಜಿಲ್ಲಾ ಸಂಚಾಲಕ ಕೆ.ಬಿ. ರಾಜು ದಲಿತ ಕಾಲೋನಿಗಳಲ್ಲಿ ರಾತ್ರಿ ಸಂದರ್ಭ ಪೆÇಲೀಸರನ್ನು ನಿಯೋಜಿಸುವಂತೆ ಮನವಿ ಮಾಡಿದರು. ಸಭೆಯಲ್ಲಿ ಹಾಜರಿದ್ದ ದಲಿತ ಪ್ರಮುಖರ ಸಮಸ್ಯೆಗಳನ್ನು ಆಲಿಸಿ ಮಾತನಾಡಿದ ಪೆÇಲೀಸ್ ಉಪ ಅಧೀಕ್ಷಕ ಶೈಲೇಂದ್ರ ಕುಮಾರ್ ನಗರದ ಕಾಳಮ್ಮ ಕಾಲೋನಿ, ಟೌನ್ ಕಾಲೋನಿ, ಅಂಬೇಡ್ಕರ್ ಕಾಲೋನಿ, ವಿವೇಕಾನಂದ ಬಡಾವಣೆ, ಆದರ್ಶ ದ್ರಾವಿಡ ಕಾಲೋನಿ ಮತ್ತು ಮಾದಾಪಟ್ಟಣ ಗ್ರಾಮದಲ್ಲಿ ವಾಸಿಸುತ್ತಿರುವ ಬಹುತೇಕ ದಲಿತ ಕಾಲೋನಿಗಳಲ್ಲಿ ಹಲವು ಮೂಲಭೂತ ಸೌಲಭ್ಯಗಳ ಜೊತೆಗೆ ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ನಿಗಾ ವಹಿಸಲಾಗುವುದು. ಮತ್ತು ಅಕ್ರಮ ಚಟುವಟಿಕೆಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ವೃತ್ತನಿರೀಕ್ಷಕ ಮಹೇಶ್, ಕುಶಾಲನಗರ ನಗರ ಠಾಣಾಧಿಕಾರಿ ಗಣೇಶ್ ಮಾತನಾಡಿದರು. ದಲಿತ ಪ್ರಮುಖರಾದ ಹೆಚ್.ಜೆ. ದಾಮೋದರ. ಹೆಚ್.ಟಿ. ವಸಂತ, ಕೆ.ಟಿ. ಶ್ರೀನಿವಾಸ್, ಕೆ.ಜೆ. ಶಿವರಾಜ್, ಜಯಪ್ರಕಾಶ್, ಸಿ.ಜೆ. ಚೆನ್ನಯ್ಯ, ಎಸ್.ಜೆ. ರಾಜು ಮತ್ತಿತರರು ಸಭೆಯಲ್ಲಿ ಇದ್ದರು.