ಮಡಿಕೇರಿ, ಆ. 25: ಭಾರತೀಯ ಸೇವೆಯ ಎಂ.ಇ.ಜಿ. ರೆಜಿಮೆಂಟ್‍ನಲ್ಲಿ ಸುಬೇದಾರ್ ಆಗಿ ಸೇವೆ ಸಲ್ಲಿಸುತ್ತಿರುವ ಸೆದುಮುಡಿರ ಪಿ. ಪೂವಯ್ಯ ಅವರು ಹಾನರರಿ ಲೆಫ್ಟಿನೆಂಟ್ ಆಗಿ ಬಡ್ತಿ ಹೊಂದಿದ್ದಾರೆ. ಕಿಕ್ಕರಳ್ಳಿ ಗ್ರಾಮದ ಸೆದುಮುಡಿರ ಪೊನ್ನಪ್ಪ ಹಾಗೂ ಪೊನ್ನಮ್ಮ ದಂಪತಿಯರ ಪುತ್ರರಾಗಿರುವ ಪೂವಯ್ಯ ಕಳೆದ 30 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.