ಸೋಮವಾರಪೇಟೆ: ಪಟ್ಟಣದ ಮಹದೇಶ್ವರ ಬಡಾವಣೆಯ ಶ್ರೀ ಮುನೀಶ್ವರ ದೇವಸ್ಥಾನವನ್ನು ಅಗ್ನಿಶಾಮಕ ಠಾಣೆಯ ಸಿಬ್ಬಂದಿ ವರ್ಗದವರ ಸಹಯೋಗದೊಂದಿಗೆ ಶುಚಿಗೊಳಿಸಲಾಯಿತು.

ಕರ್ಕಳ್ಳಿ ಕಟ್ಟೆಬಸವೇಶ್ವರ ದೇವಸ್ಥಾನ, ನಂದಿಗುಂದ ಗ್ರಾಮದ ಆಂಜನೇಯ ದೇವಸ್ಥಾನ, ಕೊರ್ಲಳ್ಳಿಯ ಚೌಡೇಶ್ವರಿ ದೇವಸ್ಥಾನ, ತಣ್ಣೀರುಹಳ್ಳದ ಶ್ರೀ ಬಸವೇಶ್ವರ ದೇವಸ್ಥಾನಗಳನ್ನು ಪ್ರಗತಿಬಂಧು ಹಾಗೂ ಸ್ವಸಹಾಯ ಸಂಘಗಳ ಸದಸ್ಯರು, ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಶುಚಿಗೊಳಿಸಲಾಯಿತು.

ಈ ಸಂದರ್ಭ ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು, ವಲಯದ ಸೇವಾಪ್ರತಿನಿಧಿಗಳಾದ ತಾರಾಲಕ್ಷ್ಮೀ, ಸಮೀರಾ, ಎಸ್.ಎಸ್. ಶೈಲಾ, ಮಹೇಶ್, ಉಷಾರಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.ಸುಂಟಿಕೊಪ್ಪ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ ಸಹಾಯ ಸಂಘಗಳ ಸುಂಟಿಕೊಪ್ಪ ಒಕ್ಕೂಟ ಮತ್ತು ಸ್ವ ಸಹಾಯ ಸಂಘಗಳÀ ಸದಸ್ಯರು ಶ್ರದ್ಧಾ ಕೇಂದ್ರದ ಸ್ವಚ್ಛತಾ ಕಾರ್ಯ ನಡೆಸಿದರು.

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಕಾರ್ಯಕ್ರಮದಡಿಯಲ್ಲಿ ಸುಂಟಿಕೊಪ್ಪ ಒಕ್ಕೂಟದ ಮತ್ತು ಸದಸ್ಯರು ಶ್ರೀ ರಾಮ ಮಂದಿರ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡು ದೇವಾಲಯದ ಆವರಣದಲ್ಲಿ ಬೆಳೆದು ನಿಂತಿದ್ದ ಕಾಡು, ಗಿಡ, ಗುಂಟೆ ಕಡಿದು, ಕಸ, ಕಡ್ಡಿಗಳನ್ನು ತೆಗೆದು ಸ್ವಚ್ಛಗೊಳಿಸಿದರು.

ಈ ಸಂದರ್ಭದಲ್ಲಿ ಯೋಜನೆಯ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ರಮಣಿ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಎ. ಶ್ರೀಧರ್‍ಕುಮಾರ್, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಬಿ.ಎಂ. ಸುರೇಶ್, ಶ್ರೀ ರಾಮ ಸೇವಾ ಸಮಿತಿಯ ಸಹಕಾರ್ಯದರ್ಶಿ ಬಿ.ಎಸ್. ಅಶೋಕ್ ಶೇಟ್, ದೇವಸ್ಥಾನ ಆರ್ಚಕರಾದ ಮನೋಜ್, ದರ್ಶನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಚಿತ್ರಾ, ಸಂಘದ ಸದಸ್ಯರು ಇದ್ದರು.ಸೋಮವಾರಪೇಟೆ: ಜೇಸಿಐ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ಸಹಯೋಗದೊಂದಿಗೆ ಪಟ್ಟಣದ ಆನೆಕೆರೆ ಸಮೀಪದ ಅರಳಿಕಟ್ಟೆಯ ಸ್ವಚ್ಛತೆಯನ್ನು ನಡೆಸಲಾಯಿತು. ಇದರೊಂದಿಗೆ ಅರಳಿ ಮರದ ವಿಶೇಷತೆಯನ್ನು ಬಿಂಬಿಸುವ ಮಾಹಿತಿ ಫಲಕವನ್ನು ಅಳವಡಿಸಲಾಯಿತು.

ಈ ಸಂದರ್ಭ ಮಾತನಾಡಿದ ಯೋಜನಾಧಿಕಾರಿ ವೈ. ಪ್ರಕಾಶ್, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಡಿ ತಾಲೂಕಿನಾದ್ಯಂತ 70 ದೇವಾಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜೇಸೀ ಅಧ್ಯಕ್ಷೆ ಉಷಾರಾಣಿ ಗುರುಪ್ರಸಾದ್, ಒಕ್ಕೂಟದ ಅಧ್ಯಕ್ಷೆ ದಿವ್ಯ ಹಾಲಪ್ಪ, ಪ.ಪಂ. ಸದಸ್ಯ ಪಿ.ಕೆ. ಚಂದ್ರು, ವಲಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಸೇವಾ ಪ್ರತಿನಿಧಿ ಮೀನಾ ಮಂಜುನಾಥ್ ಸೇರಿದಂತೆ ವಿವಿಧ ಪ್ರಗತಿ ಬಂಧು ಮತ್ತು ಸ್ವಸಹಾಯ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.