ಸಿದ್ದಾಪುರ, ಆ. 25: ಮುಚ್ಚಿದ್ದ ಕಾಫಿ ಮಿಲ್ ಗೋದಾಮಿನಿಂದ ಕಳ್ಳರು ಯಂತ್ರೋಪಕರಣ ಕಳವು ಮಾಡಿರುವ ಘಟನೆ ಕೊಂಡಂಗೇರಿ ಗ್ರಾಮದಲ್ಲಿ ನಡೆದಿದೆ. ಕೇರಳ ರಾಜ್ಯದ ನಿವಾಸಿ ರಶೀದ್ ಎಂಬವರಿಗೆ ಸೇರಿದ ಕೊಂಡಂಗೇರಿ ಗ್ರಾಮದಲ್ಲಿ ಕಾಫಿ ಮಿಲ್ ಗೋದಾಮಿನಲ್ಲಿ ಇಟ್ಟಿದ್ದ ಯಂತ್ರೋಪಕರಣ ಹಾಗೂ ಬಿಡಿಭಾಗಗಳನ್ನು ಕಳವು ಮಾಡಲಾಗಿದೆ ಎಂದು ಅಲ್ಲಿನ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಸುಗಂಧ ಎಂಬವರು ದೂರು ನೀಡಿದ್ದಾರೆ. ಸಿದ್ದಾಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.