ನಾಪೋಕ್ಲು, ಆ. 25: ಮನೆ ನಿರ್ಮಾಣಕ್ಕೆಂದು ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಎಮ್ಮೆಮಾಡು ಗ್ರಾಮದಲ್ಲಿ ಉರುಳಿಬಿದ್ದಿದೆ. ಎಮ್ಮೆಮಾಡು ನಿವಾಸಿ ಸಿದ್ದಿಕ್ ಅವರ ಮನೆಗೆ ಸಾಮಗ್ರಿಗಳನ್ನು ಕೊಂಡೊಯ್ಯುವಾಗ ಈ ಅವಘಡ ಸಂಭವಿಸಿದೆ.