ಸೋಮವಾರಪೇಟೆ: ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆಯಲ್ಲಿ ಇಲ್ಲಿನ ಐಗೂರು ಸರಕಾರಿ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಕೆ.ಆರ್. ಹರ್ಷಿತಾ, ಕನ್ನಡ ಮಾಧ್ಯಮದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಒಟ್ಟು 598 ಅಂಕಗಳನ್ನು ಪಡೆದಿದ್ದಾಳೆ.

ಹೆಬ್ಬಾಲೆ: ಹೆಬ್ಬಾಲೆ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ಶೇ. 95 ಫಲಿತಾಂಶ ದೊರೆತಿದೆ.

ವೀರಾಜಪೇಟೆ: ಕಳತ್ಮಾಡುವಿನ ಲಯನ್ಸ್ ಪ್ರೌಢಶಾಲೆಯ ಅನುಷಾ ಪೊನ್ನಮ್ಮ 617 ಅಂಕಗಳನ್ನುಗಳಿಸಿ ವೀರಾಜಪೇಟೆ ತಾಲೂಕಿಗೆ ಪ್ರಥಮ, ಟಿ. ಸಿಂಚನಾ 614 ಅಂಕಗಳನ್ನು ಗಳಿಸಿ ಎರಡನೇ ಸ್ಥಾನ ಪಡೆದರೆ, ಪೊನ್ನಂಪೇಟೆಯ ಸೈಂಟ್ ಅಂತೋಣಿ ಪ್ರೌಢಶಾಲೆಯ ಬಿ.ಡಿ. ಲಾಂಚನ 614 ಅಂಕಗಳನ್ನು ಪಡೆದು ಎರಡನೇ ಸ್ಥಾನವನ್ನು ಸಮನಾಗಿ ಹಂಚಿಕೊಂಡಿದ್ದಾರೆ.

ಮಾಯಮುಡಿ ಗ್ರಾಮದ ಸರಕಾರಿ ಪ್ರೌಢಶಾಲೆ, ವೀರಾಜಪೇಟೆಯ ಕಾವೇರಿ ಪ್ರೌಢಶಾಲೆ, ಪ್ರಗತಿ ಪ್ರೌಢಶಾಲೆ, ಕೂರ್ಗ್ ವ್ಯಾಲಿ ಪ್ರೌಢಶಾಲೆ, ಕಳತ್ಮಾಡು ಲಯನ್ಸ್ ಪ್ರೌಢಶಾಲೆ, ಅರವತ್ತೊಕ್ಕಲು ಗ್ರಾಮದ ಸರ್ವದೈವತಾ ಪ್ರೌಢಶಾಲೆ, ಶ್ರೀಮಂಗಲದ ಜೆ.ಸಿ. ಪ್ರೌಢಶಾಲೆ, ಟಿ. ಶೆಟ್ಟಿಗೇರಿಯ ರೂಟ್ಸ್ ಪ್ರೌಢಶಾಲೆ, ಬಿಟ್ಟಂಗಾಲ ಗ್ರಾಮದ ರೋಟರಿ ಪ್ರೌಢಶಾಲೆ ಹಾಗೂ ಅಮ್ಮತ್ತಿಯ ನೇತಾಜಿ ಪ್ರೌಢಶಾಲೆ ಶೇ. 100ರಷ್ಟು ಫಲಿತಾಂಶವನ್ನು ಗಳಿಸಿದೆ.

ತಾಲೂಕಿನ ಸರಕಾರಿ 13 ಪ್ರೌಢಶಾಲೆಗಳಲ್ಲಿ ಶೇ. 72, 2, ಸರಕಾರಿ ವಸತಿ ಶಾಲೆಗಳಲ್ಲಿ ಶೇ. 84, 15, ಅನುದಾನ ಶಾಲೆಗಳಲ್ಲಿ ಶೇ. 72, 27 ಅನುದಾನ ರಹಿತ ಶಾಲೆಗಳಲ್ಲಿ ಶೇ. 94 ಫಲಿತಾಂಶ ಬಂದಿದೆ ಎಂದು ತಾಲೂಕು ನೋಡಲ್ ಅಧಿಕಾರಿ ಪಿ.ಆರ್. ಅಯ್ಯಪ್ಪ ತಿಳಿಸಿದ್ದಾರೆ.

ಗೋಣಿಕೊಪ್ಪ ವರದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪೊನ್ನಂಪೇಟೆ ಕ್ರೀಡಾ ವಸತಿ ನಿಲಯಕ್ಕೆ ಶೇ. 100 ಫಲಿತಾಂಶ ಲಭಿಸಿದೆ.

ಶನಿವಾರಸಂತೆ: ಸಮೀಪದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮಿ ವಿದ್ಯಾ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ. 95 ಫಲಿತಾಂಶ ಲಭಿಸಿದೆ. ವಿದ್ಯಾರ್ಥಿನಿಯರಾದ ವಿ.ಆರ್. ಸುಕನ್ಯಾ ಶೇ. 95, ಬಿ.ವಿ. ಮನಸ್ವಿ ಶೇ. 85, ಎನ್.ಎಲ್. ಸಮೀಕ್ಷಾ ಶೇ. 94 ಪಡೆದು ಪ್ರಥಮ 3 ಸ್ಥಾನ ಪಡೆದಿದ್ದಾರೆ.

ಸುಂಟಿಕೊಪ್ಪ: ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಸಿ.ಎಸ್. ಚಂದನ 604 ಅಂಕಗಳಿಸಿದ್ದು, ಶೇ. 96.7 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಶಾಲೆಯ ಬಿ.ಡಿ. ಮಧುರ 602 ಅಂಕಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ದ್ವಿತೀಯ ಸ್ಥಾನ ಅಬೂತ್‍ವಾಹಿರ್ 589 ಹಾಗೂ ತೃತೀಯ ಸ್ಥಾನ ಕೆ.ಎಸ್. ಪ್ರಗತಿ 588 ಅಂಕಗಳಿಸಿಕೊಂಡು ಶಾಲೆಗೆ ಪ್ರಮುಖ ಸ್ಥಾನಗಳನ್ನು ಪಡೆದಿದ್ದಾರೆ. ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಗೆ ಶೇ. 100 ಫಲಿತಾಂಶ ದೊರೆತಿದೆ.

ಸಂತಮೇರಿ ಆಂಗ್ಲ ಮಾಧ್ಯಮ ಶಾಲೆಯು ಶೇ. 84.12 ಪಡೆದುಕೊಂಡಿದೆ. ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಒಟ್ಟು 39 ಮಕ್ಕಳು ಪರೀಕ್ಷೆಯನ್ನು ಎದುರಿಸಿದ್ದು 17 ಮಕ್ಕಳು ತೇರ್ಗಡೆಗೊಂಡಿದ್ದು, ಶೇ. 44 ಫಲಿತಾಂಶ ಪಡೆದುಕೊಂಡಿದ್ದಾರೆ.

ಸೋಮವಾರಪೇಟೆ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಇಲ್ಲಿನ ಸಾಂದೀಪನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ. 100 ಫಲಿತಾಂಶ ಲಭಿಸಿದ್ದು, ವಿದ್ಯಾರ್ಥಿನಿ ಗಾನ 618 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಚೌಡ್ಲು ಗ್ರಾಮದ ವಿಶ್ವಮಾನವ ಕುವೆಂಪು ಪ್ರೌಢಶಾಲೆಗೆ ಶೇ. 100 ಫಲಿತಾಂಶ ದೊರೆತಿದೆ. ವಿದ್ಯಾರ್ಥಿ ಹೆಚ್.ಕೆ. ರಾಹುಲ್ 607 ಅಂಕಗಳನ್ನು ಪಡೆದು ಪ್ರಥಮ ಸ್ಥಾನ ಪಡೆದಿದ್ದಾನೆ.

ಓ.ಎಲ್.ವಿ. ಆಂಗ್ಲ ಮಾಧ್ಯಮ ಶಾಲೆಗೆ ಶೇ. 95.89 ಫಲಿತಾಂಶ ದೊರೆತಿದೆ. ಶಾಲೆಯ ವಿದ್ಯಾರ್ಥಿನಿ ಎನ್.ಕೆ. ಶ್ರಾವಣಿ 605 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 19 ವಿದ್ಯಾರ್ಥಿಗಳಲ್ಲಿ 16 ವಿದ್ಯಾರ್ಥಿಗಳು ತೇರ್ಗಡೆಗೊಂಡು ಶೇ. 84.2 ಫಲಿತಾಂಶ ದೊರೆತಿದೆ. ಕೆ.ಆರ್. ಹರ್ಷಿತಾ 598 ಅಂಕ ಪಡೆಯುವ ಮೂಲಕ ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಗೋಣಿಕೊಪ್ಪ ವರದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಮಾಯಮುಡಿ ಸರ್ಕಾರಿ ಪ್ರೌಢಶಾಲೆ ಶೇ. 100 ಫಲಿತಾಂಶ ಪಡೆದುಕೊಂಡಿದೆ.

ವೀರಾಜಪೇಟೆ: ವೀರಾಜಪೇಟೆಯ ಬ್ರೈಟ್ ಪಬ್ಲಿಕ್ ಶಾಲೆಯ 23 ವಿದ್ಯಾರ್ಥಿಗಳ ಪೈಕಿ 20 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶಾಲೆಗೆ 86.70 ಫಲಿತಾಂಶ ದೊರೆತಿದೆ. ಶಾಲೆಯ ಇ.ಎ. ತಹ್‍ಸಿನಾ ಫಿದಾ 568 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ.

ಸಿದ್ದಾಪುರ: ಸಿದ್ದಾಪುರದ ಶ್ರೀ ಕೃಷ್ಣ ವಿದ್ಯಾಮಂದಿರಕ್ಕೆ ಶೇ. 100 ರಷ್ಟು ಫಲಿತಾಂಶ ದೊರೆತಿದೆ. ಶಾಲೆಯ ವಿದ್ಯಾರ್ಥಿನಿ ರಿಶಾ ಶರಿನ್ 615 ಅಂಕಗಳನ್ನು ಗಳಿಸುವುದರೊಂದಿಗೆ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ.