ಕೂಡಿಗೆ, ಆ. 23: ಮೈಸೂರಿನ ಓಡಿಪಿ ಸಂಸ್ಥೆಯ ವತಿಯಿಂದ ಕೂಡುಮಂಗಳೂರು ಗ್ರಾಮದ ಭೂಮಿಕ ರೈತ ಕೂಟದ 30 ಸದಸ್ಯರಿಗೆ ಉಚಿತವಾಗಿ ಗೊಬ್ಬರ ಮತ್ತು ತಿಪಟೂರು ತಳಿಯ ತೆಂಗಿನ ಗಿಡಗಳನ್ನು ಕೂಡುಮಂಗಳೂರು ಸಮುದಾಯ ಭವನದ ಸಭಾಂಗಣದಲ್ಲಿ ವಿತರಣೆ ಮಾಡಲಾಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಮೈಸೂರಿನ ಓಡಿಪಿ ಸಂಸ್ಥೆಯ ನಿರ್ದೇಶಕ ಅಲೆಕ್ಸ್ ಪ್ರಶಾಂತ್ ಸಿಕ್ವೇರಾ ನೆರವೇರಿಸಿದರು. ನಂತರ ಮಾತನಾಡಿ, ಸಂಸ್ಥೆಯು ಸಮುದಾಯದಲ್ಲಿ ಸಾಮಾಜಿಕ, ಶೈಕ್ಷಣಿಕ, ಸಾಂಸ್ಕøತಿಕ, ರಾಜಕೀಯ ಮತ್ತು ಆರ್ಥಿಕವಾಗಿ ಹಿಂದುಳಿದವರ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಯೋಜಕ ಜಾನ್ ಬಿ. ರಾಡ್ರಿಗಸ್ ಪ್ರಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯು 4 ಜಿಲ್ಲೆಯ 150 ಹಳ್ಳಿಗಳಲ್ಲಿ ರೈತ ಕೂಟಗಳನ್ನು ರಚನೆ ಮಾಡಿ, ಇದರಲ್ಲಿ 20 ಸಾವಿರಕ್ಕೂ ಹೆಚ್ಚು ಸದಸ್ಯರು ನೋಂದಣಿ ಆಗಿ ಯೋಜನೆ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ ಎಂದರು.

ಈ ಸಂದರ್ಭ ಮಂಡ್ಯ ಮತ್ತು ಕೊಡಗು ಮಹಿಳೋದಯ ಒಕ್ಕೂಟದ ಸಂಯೋಜಕರಾದ ಮೋಲಿ ಪುರ್ಟಾಡೊ, ವಲಯ ಸಂಯೋಜಕ ಜೋಯ್ಸಿ ಮಿನೇಜೆಸ್, ಭೂಮಿತಾಯಿ ಸಮಿತಿಯ ಅಧ್ಯಕ್ಷ ಹೊನ್ನಮ್ಮ, ಕಾರ್ಯಧ್ಯಕ್ಷ ಇತರರು ಹಾಜರಿದ್ದರು.

ಕೂಡುಮಂಗಳೂರು ಗ್ರಾಮ ರೈತ ಕೂಟದ 30 ಸದಸ್ಯರಿಗೆ ಉಚಿತವಾಗಿ ಗೊಬ್ಬರ ಮತ್ತು ತೆಂಗಿನ ಗಿಡಗಳನ್ನು ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಮತ್ತು ರೈತರು ಭಾಗವಹಿಸಿದ್ದರು.