ಮಡಿಕೇರಿ, ಆ. 23: ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ ಮೂಲಕ 2020-21 ನೇ ಸಾಲಿನಲ್ಲಿ ಬ್ಯಾಂಕ್‍ಗಳ ಸಹಯೋಗದೊಂದಿಗೆ ಸ್ವಯಂ ಉದ್ಯೋಗ ಸಾಲ ಯೋಜನೆ, ಕಿರುಸಾಲ, ಸ್ವಸಹಾಯ ಗುಂಪುಗಳಿಗೆ ಸಹಾಯ ಧನ, ಗಂಗಾಕಲ್ಯಾಣ ನೀರಾವರಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತಾ ತರಬೇತಿ ಯೋಜನೆಗಳಲ್ಲಿ ಸೌಲಭ್ಯ ಪಡೆಯಲಿಚ್ಛಿಸುವ ಅರ್ಹ ಫಲಾನುಭವಿಗಳಿಂದ ನಿಗದಿತ ನಮೂನೆಯಲ್ಲಿ ಆನ್‍ಲೈನ್, ಆಫ್‍ಲೈನ್ (ಔಟಿಟiಟಿe/ಔಜಿಜಿಟiಟಿe) ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ನಮೂನೆಯನ್ನು ಸಂಬಂಧಪಟ್ಟ ಜಿಲ್ಲೆಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ನಿಯಮಿತ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿಯಲ್ಲಿ ಅರ್ಜಿಗಳನ್ನು ನಿಗಮದ ವೆಬ್‍ಸೈಟ್ ವಿಳಾಸ hಣಣಠಿs://ಚಿmbigಚಿಡಿಚಿಜeveಟoಠಿmeಟಿಣ.ಞಚಿಡಿಟಿಚಿಣಚಿಞಚಿ.gov.iಟಿ ಗೆ ಭೇಟಿ ನೀಡಿ ಆನ್‍ಲೈನ್ ಮೂಲಕ ಸಹ ಸಲ್ಲಿಸಬಹುದು. ಅರ್ಜಿಯಲ್ಲಿ ನಮೂದಿಸಿರುವಂತಹ ದಾಖಲಾತಿಗಳನ್ನು ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು, ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 1 ರವರೆಗೆ ಅವಧಿ ವಿಸ್ತರಿಸಲಾಗಿದೆ.

ಅರ್ಜಿದಾರರು ಕೋಲಿ, ಗಂಗಾಮತ, ಬೆಸ್ತ, ಕಬ್ಬಲಿಗ, ಮೊಗವೀರ, ಅಂಬಿಗ, ಅಂಬಿ, ಬಾರ್ಕಿ, ಬಾರಿಕ, ಬೆಸ್ತರ್, ಭೋಯಿ, ರಾಜಬೋಯಿ, ಬುಂಡೆ-ಬೆಸ್ತರ್, ದಾಲ್ಚಿ, ದಾವತ್, ಗಬಿಟ್, ಗಲಾಡಕೊಂಕಣಿ, ಗಂಗೆಮಕ್ಕಳು, ಗಂಗಾಕುಲ, ಗಂಗಾಮತಸ್ಥ, ಗಂಗಾಪುತ್ರ, ಗೌರಿಮತ, ಬುಂಡೆ-ಬೆಸ್ತ, ಗುಂಡೆಬೆಸ್ತ, ಹರಕಂತ್ರ, ಜಲಗಾರ, ಕಬ್ಬೇರ, ಕಬ್ಬೇರ್, ಕಬ್ಬಿಲಿ, ಕಹರ್, ಖಾರ್ವಿ, ಕೊಂಕಣಖಾರ್ವಿ, ಕೋಳಿಮಹದೇವ್, ಮಡ್ಡರ್, ಮೀನಗಾರ್, ಮಗೇರ್, ಮುಕ್ಕವಾನ್, ಪರಿವಾರ, ಸಿವಿಯರ್, ಸುಣಗಾರ, ತೊರೆಯ, ವಾಗಿ ಜಾತಿಗೆ ಸೇರಿದವರಾಗಿರಬೇಕು.

ಸರ್ಕಾರದ ಯಾವುದಾದರೂ ನಿಗಮಗಳ ಯೋಜನೆಯಡಿಯಲ್ಲಿ ಕುಟುಂಬದ ಯಾರೇ ಆಗಲಿ ಈಗಾಗಲೇ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಒಂದು ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚಿನವರಿಗೆ ಸೌಲಭ್ಯ ಒದಗಿಸಲಾಗುವುದಿಲ್ಲ.

ಈ ಯೋಜನೆಗಳಲ್ಲಿ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವ ಈ ಸಮುದಾಯಗಳ ಫಲಾಪೇಕ್ಷಿಗಳು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಮಡಿಕೇರಿ ಇಲ್ಲಿ ಉಚಿತವಾಗಿ ಸಂಬಂಧಿಸಿದ ಯೋಜನೆಯ ಅರ್ಜಿಗಳನ್ನು ಪಡೆಯುವುದು. ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 1 ರ ಸಂಜೆ 4.30 ಗಂಟೆಯೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ದೂ.ಸಂ: 08272-221656 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.