ಕುಶಾಲನಗರ, ಆ. 23: ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕುಶಾಲನಗರದ ನಾಡಕಚೇರಿ ಮುಂಭಾಗ ಸೇರಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಭೂಸುಧಾರಣೆ ಕಾಯ್ದೆ ತಿದ್ದುಪಡಿ, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಮೂಲಕ ಸರಕಾರ ಕಾಪೆರ್Çರೇಟ್ ವ್ಯವಸ್ಥೆಗೆ ಒತ್ತು ನೀಡಿ ರೈತರು, ಕಾರ್ಮಿಕರು, ಜನಸಾಮಾನ್ಯ ರನ್ನು ಪ್ರಪಾತಕ್ಕೆ ನೂಕುತ್ತಿದೆ. ಕೊರೊನಾ ನಿಗ್ರಹಿಸುವಲ್ಲಿ ಕೂಡ ವಿಫಲರಾಗುವುದರೊಂದಿಗೆ ಭ್ರಷ್ಟಾಚಾರ ಕೂಡ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರಕಾರಗಳು ಮಾಡಿರುವ ತಿದ್ದುಪಡಿಗಳನ್ನು ಕೂಡಲೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಕುಶಾಲನಗರ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಕೊರೊನಾ ನಿಗ್ರಹಿಸುವಲ್ಲಿ ಕೂಡ ವಿಫಲರಾಗುವುದರೊಂದಿಗೆ ಭ್ರಷ್ಟಾಚಾರ ಕೂಡ ನಡೆದಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರಕಾರಗಳು ಮಾಡಿರುವ ತಿದ್ದುಪಡಿಗಳನ್ನು ಕೂಡಲೆ ಹಿಂಪಡೆದುಕೊಳ್ಳಬೇಕು ಎಂದು ಆಗ್ರಹಿಸಿ ಕುಶಾಲನಗರ ಕಂದಾಯ ಇಲಾಖೆ ಅಧಿಕಾರಿಗಳ ಮೂಲಕ ಐಎನ್‍ಟಿಯುಸಿ ಜಿಲ್ಲಾ ಘಟಕ ಅಧ್ಯಕ್ಷ ಗೋವಿಂದರಾಜ್‍ದಾಸ್, ಕುಶಾಲನಗರ ನಗರ ಕಾಂಗ್ರೆಸ್ ಘಟಕ ಅಧ್ಯಕ್ಷ ಶರೀಫ್ ಇಬ್ರಾಹಿಂ, ಐಎನ್‍ಟಿಯುಸಿ ಜಿಲ್ಲಾ ಘಟಕ ಅಧ್ಯಕ್ಷ ಗೋವಿಂದರಾಜ್ ದಾಸ್, ಜನಪ್ರತಿನಿಧಿಗಳಾದ ರಾಧಾ, ಕಿಶೋರ್, ಪ್ರಮುಖರಾದ ಗೀತಾ, ಜನಾರ್ಧನ್, ವೀರೇಂದ್ರ, ನಿಂಗರಾಜ್ ಮತ್ತಿತರರು ಇದ್ದರು.