ಬಾಳಲೆ, ಆ. 21: ಬಾಳಲೆ ವಿಭಾಗದ ನಿಟ್ಟೂರು, ಕಾರ್ಮಾಡು, ಬಾಳೆಲೆ, ಪೊನ್ನಪ್ಪಸಂತೆ, ಮಾಯಮುಡಿ, ಕೋಣನಕಟ್ಟೆ ಪ್ರದೇಶದಲ್ಲಿ ಸೂಕ್ತ ಬಸ್ ವ್ಯವಸ್ಥೆ ಇಲ್ಲವಾಗಿದ್ದು, ಜನತೆ ಸಂಚಾರಕ್ಕೆ ಪರದಾಡುವಂತಾಗಿದೆ.

ಈ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಉದ್ಯೋಗಿಗಳು, ಗ್ರಾಮಸ್ಥರು ಕೋರ್ಟ್ ಕಚೇರಿಗೆ, ಆಸ್ಪತ್ರೆ ಮತ್ತು ಇತರೆ ತುರ್ತು ಕಾರ್ಯಗಳಿಗೆ ಹೋಗಿ ಬರಲು ಬಸ್ಸುಗಳ ವ್ಯವಸ್ಥೆ ಇಲ್ಲದೆ ತೊಂದರೆಗೀಡಾಗಿದ್ದಾರೆ. ಕೊರೊನಾ ಪೂರ್ವದಲ್ಲಿ ಬಾಳೆಲೆ ಹೊಬಳಿ ವ್ಯಾಪ್ತಿಗೆ ದಿನನಿತ್ಯ ಖಾಸಗಿ ಮತ್ತು ಸಾರಿಗೆ ಸಂಸ್ಥೆಯ ಬಸ್ಸುಗಳು ಸೇರಿದಂತೆ 25 ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು.

ಲಾಕ್‍ಡೌನ್ ನಂತರ ಎಲ್ಲಾ ಬಸ್‍ಗಳು ಸಂಚಾರ ನಿಲ್ಲಿಸಿದ ನಂತರ ಯಾವುದೇ ಬಸ್‍ಗಳು ಇಲ್ಲದೆ ಜನರಿಗೆ ಸಮಸ್ಯೆಗಳಾಗುತ್ತಿದೆ ಮೇ ತಿಂಗಳಲ್ಲಿ ಮಡಿಕೇರಿ ಘಟಕದ ಹಾಲಿ ಸಂಚರಿಸಬೇಕಾದ ಎರಡು ಬಸ್ ಗಳನ್ನು ಆರಂಭಿಸಲಾಗಿ ತ್ತಾದರೂ ಸದರಿ ಬಸ್ ಒಂದು ದಿನ ಸಂಚರಿಸಿದರೆ ಮತ್ತೆ ಕೆಲವು ದಿನ ಸಂಚರಿಸದೆ ಜನರು ಗೊಂದಲಕ್ಕೆ ಒಳಗಾಗಿದ್ದರು. ಚಾಲಕರೊಬ್ಬರು ಮಾರ್ಗ ಪೂರ್ಣ ಗೊಳಿಸದಿರುವುದನ್ನು ಮತ್ತು ಬಸ್‍ನ್ನು ನಿಗದಿತ ಸಮಯಕ್ಕೆ ಮುಂಚೆಯೇ ಸಂಚರಿಸುತಿದ್ದುದನ್ನು ಪ್ರಯಾಣಿಕÀರು ಘಟಕ ಆಧಿಕಾರಿಗಳ ಗಮನಕ್ಕೆ ತಂದರೂ ಸುಧಾರಣೆ ತಾರದೆ ಸಂಸ್ಥೆಗೆ ನಷ್ಟವೂ ಸಾರ್ವಜನಿಕರಿಗೆ ಅನಾನುಕೂಲವೂ ಆಗಿದೆ ಒಂದೆರಡು ವಾರ ಹೀಗೆ ಸಂಚಾರಿಸಿ ಬಸ್‍ಗಳನ್ನು ನಷ್ಟದ ನೆಪದಲ್ಲಿ ನಿಲ್ಲಿಸಿರುವುದು ಸಾರಿಗೆ ಸಂಸ್ಥೆಯಿಂದ ಆದ ಪ್ರಮಾದವಾಗಿದೆ ಮಾರ್ಗ ಸೂಚಿ ಹಾಗೂ ಸಮಯ ಪಾಲಿಸದೆ ಸಂಚರಿಸುವುದು ಸರಿಯಲ್ಲ.

ತಪ್ಪಿತಸ್ಥ ಸಿಬ್ಬಂದಿಯನ್ನು ಮರ್ಗದಿಂದ ಬದಲಾಯಿಸಿ ಸಾರ್ವಜನಿಕ ಸೇವೆಗೆ ಈ ಮಾರ್ಗದಲ್ಲಿ ಬಸ್ ಸಂಚಾರಕ್ಕೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೈಗೊಳ್ಳಬೇಕೆಂದು ನಿಟ್ಟೂರು ಕಾರ್ಮಾಡು ಶ್ರೀ ರಾಮ ಸಂಘದ ಅಧ್ಯಕ್ಷ ಕೊಟ್ಟಂಗಡ ಮಂಜುನಾಥ್, ಇಗ್ಗುತ್ತಪ್ಪ ಸಂಘದ ಅಧ್ಯಕ್ಷರಾದ ಕಾಟಿಮಾಡ ಶಿವಪ್ಪ, ವಿಜಯ ಗ್ರಾಮೀಣ ಯವಕ ಸಂಘ ಸೇರಿದಂತೆ ಸಂಘ ಸಂಸ್ಥೆಗಳು ಜಿಲ್ಲಾಡಳಿತ ಮತ್ತು ಸಾರಿಗೆ ಇಲಾಖೆಯನ್ನು ಆಗ್ರಹಿಸಿವೆ.