ಮಡಿಕೇರಿ, ಆ. 21: ಸರಕಾರದಿಂದ ನೂತನ ತಾಲೂಕಾಗಿ ಪ್ರಕಟಗೊಂಡಿರುವ ಪೊನ್ನಂಪೇಟೆ ತಾಲೂಕು ರಚನೆ ಕುರಿತಾದ ಅಧಿಕೃತವಾದ ಅಧಿಸೂಚನೆಯನ್ನು ಇದೀಗ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಲಾಗಿದೆ. ತಾಲೂಕು ರಚನೆಯ ಘೋಷಣೆ ಹಾಗೂ ಅಂತಿಮ ಆದೇಶ ಈ ಹಿಂದೆಯೇ ಸರಕಾರದಿಂದ ಹೊರಬಿದ್ದಿತ್ತಾದರೂ ಈ ತನಕ ಅಧಿಕೃತವಾದ ಅಧಿಸೂಚನೆ ಪ್ರಕಟವಾಗಿರಲಿಲ್ಲ.

ಇದೀಗ ಈ ಆದೇಶ ಅಂತಿಮವಾಗಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ನೂತನ ತಾಲೂಕಿಗೆ ತಹಶೀಲ್ದಾರ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡುವಂತೆ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.