ಮಡಿಕೇರಿ, ಆ. 20: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕೊಡವ ಸಾಹಿತ್ಯ ಕ್ಷೇತ್ರದ ಮೇರು ಸಾಹಿತಿಗಳಾದ ಐಚೆಟ್ಟಿರ ಮಾ. ಮುತ್ತಣ್ಣ ಹಾಗೂ ಬಾಚಮಾಡ ಡಿ. ಗಣಪತಿ ಅವರ ಜನ್ಮ ಶತಮಾನೋತ್ಸವದ ನೆನಪಿಗಾಗಿ ಕೊಡವ ಭಾಷೆಯಲ್ಲಿ ಪ್ರಬಂಧ, ಕಥೆ, ಕವಿತೆ ಸ್ಪರ್ಧೆಯನ್ನು ಏರ್ಪಡಿಸಿದ್ದು, ನಿಗದಿತ ಸಮಯದೊಳಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಕಚೇರಿಗೆ ತಲುಪಿಸಲು ಕೋರಿದೆ.
ಪ್ರಬಂಧದ ವಿಷಯ: ‘ಐಚೆಟ್ಟಿರ ಮಾ. ಮುತ್ತಣ್ಣ, ಬಾಚಮಾಡ ಡಿ. ಗಣಪತಿ ಬದ್‍ಕ್ ಪಿಂಞ ಸಾಧನೆ” ಮತ್ತು ಕೊಡವ ಭಾಷೆಯಲ್ಲಿ ಕವಿತೆ ಮತ್ತು ಕಥೆ (ಯಾವುದಾದರೂ ವಿಚಾರದ ಬಗ್ಗೆ). ಯಾವುದೇ ಜಾತಿ, ಧರ್ಮ, ವಯಸ್ಸಿನ ಮಿತಿಯಿಲ್ಲದೆ ಪ್ರತಿಯೊಬ್ಬರೂ ಭಾಗವಹಿಸಬಹುದು. ಪ್ರಬಂಧವು ಕೊಡವ ಭಾಷೆಯಲ್ಲೇ ಇದ್ದು, 200 ಸಾಲು ಮೀರದಂತೆ, ಸ್ಪಷ್ಟವಾಗಿ ಮುದ್ರಿತವಾಗಿರಬೇಕು, ಇಲ್ಲ ಕೈಬರಹದಲ್ಲಿರಬೇಕು. ಕಥೆಯೂ ಒಂದು ಸಾವಿರ ಪದಗಳನ್ನು ಮೀರಬಾರದು. ಒಬ್ಬ ಮೂರರಲ್ಲೂ ಭಾಗವಹಿಸಬಹುದು. ಆದರೆ ಒಂದೇ ಪ್ರಬಂಧ/ ಕಥೆ/ ಕವಿತೆಯನ್ನು ಪ್ರತಿಯೊಬ್ಬರೂ ಬರೆಯಬೇಕು. ಪ್ರಬಂಧ/ ಕಥೆ/ ಕವಿತೆಯೂ ಬೇರೆಲ್ಲೂ ಪ್ರಕಟವಾಗಿರಬಾರದು. ಹಾಗೂ ಸ್ವಂತದ್ದಾಗಿರಬೇಕು. ಅನುವಾದಿತವಾಗಿರಬಾರದು.
ಪ್ರಬಂಧ, ಕಥೆ, ಕವಿತೆ ಬರೆದು ಕಳುಹಿಸಲು ತಾ. 25 ಕೊನೆಯ ದಿನವಾಗಿದೆ. ಇದನ್ನು ಇ-ಮೇಲ್ ಅಥವಾ ಖುದ್ದಾಗಿ ತಲುಪಿಸಬೇಕು. ಪ್ರಬಂಧ, ಕಥೆ ಹಾಗೂ ಕವಿತೆ ಸ್ಪರ್ಧಾ ವಿಜೇತರಿಗೆ ಆಕರ್ಷಕ ಬಹುಮಾನ ಮತ್ತು ಅಭಿನಂದನಾ ಪತ್ರ ನೀಡಲಾಗುವುದು. ಪ್ರಬಂಧ, ಕಥೆ ಹಾಗೂ ಕವಿತೆಯನ್ನು ಬರೆದ ಹಾಳೆಯಲ್ಲಿ ತಮ್ಮ ಹೆಸರನ್ನು ಬರೆಯುವಂತಿಲ್ಲ ಅದನ್ನು ಬೇರೆ ಹಾಳೆಯಲ್ಲಿ ಬರೆಯಬಹುದು. ಹೆಚ್ಚಿನ ಮಾಹಿತಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಸ್ಕೌಟ್ ಭವನ, ಮಡಿಕೇರಿ-571201 ದೂ.ಸಂ(08272-229074) ಈ ಮೇಲ್ ವಿಳಾಸ ಞoಜಚಿvಚಿ.ಚಿಛಿಚಿಜಚಿmಥಿ@gmಚಿiಟ.ಛಿom ಸಂಪರ್ಕಿಸುವಂತೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಪಾರ್ವತಿ ಅಪ್ಪಯ್ಯ ಕೋರಿದ್ದಾರೆ.