ಕೂಡಿಗೆ, ಆ. 20: ಹಾರಂಗಿ ಜಲಾಶಯಕ್ಕೆ ಸೇರಿದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಣೆಕಟ್ಟೆಯಿಂದ ಕಳೆದ 15 ದಿನಗಳಿಂದ ನಾಲೆಗಳ ಮೂಲಕ ನೀರನ್ನು ಹರಿಸಿರುವುದರಿಂದ ಈ ಅಚ್ಚುಕಟ್ಟು ಪ್ರದೇಶದ ರೈತರು ಭತ್ತದ ಗದ್ದೆಗಳಲ್ಲಿ ನಾಟಿ ಕಾರ್ಯದಲ್ಲಿ ತೊಡಗಿದ್ದು ಈಗಾಗಲೇ ಶೇ. 80 ರಷ್ಟು ಭತ್ತ ನಾಟಿ ಕೆಲಸ ಮುಗಿದಿದೆ.

ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹುದುಗೂರು, ಮಾದಲಾಪುರ, ಬ್ಯಾಡಗೊಟ್ಟ, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮಗಳಲ್ಲಿ ರೈತರು ಕೃಷಿ ಇಲಾಖೆಯಿಂದ ಪರೀಕ್ಷಣೆಗೊಂಡ ವಿವಿಧ ಹೈಬ್ರಿಡ್ ತಳಿ ಭತ್ತದ ಬೀಜಗಳನ್ನು ಸಹಕಾರ ಸಂಘಗಳಿಂದ ಖರೀದಿಸಿ ನಂತರದ ದಿನಗಳಲ್ಲಿ ಸಸಿ ಮಡಿಗಳನ್ನು ಮಾಡಿ ಗದ್ದೆಗಳ ಸಿದ್ಧತೆಯ ನಂತರ ನಾಟಿ ಕೆಲಸ ಬರದಿಂದ ನಡೆದಿದೆ.