ಪೆರಾಜೆ, ಆ. 20: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ವೈದ್ಯರು, ನರ್ಸ್‍ಗಳು, ಆಶಾ ಕಾರ್ಯಕರ್ತೆಯರು, ಪೊಲೀಸ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳು ಶ್ರಮವಹಿಸುತ್ತಿರುವುದು ಶ್ಲಾಘನೀಯ. ಈ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆಶಾ ಕಾರ್ಯಕರ್ತೆಯರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಮನಗಂಡು ಉತ್ತೇಜನ ನೀಡುವ ಸಲುವಾಗಿ ಇಲ್ಲಿನ ಸಹಕಾರ ಸಂಘದ ವತಿಯಿಂದ ಆಶಾ ಕಾರ್ಯಕರ್ತೆಯರಾದ, ಪೂರ್ಣಾಕ್ಷಿ ಎ.ಟಿ, ದಿವ್ಯಾ ಹೆಚ್.ಯು, ಹೇವiಲತಾ ಆರ್.ಎಸ್ ಮತ್ತು ಜಯಂತಿ .ಕೆ.ಎಂ ಇವರುಗಳಿಗೆ ತಲಾ ರೂ.3,000/- ದಂತೆ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಪ್ರೋತ್ಸಾಹಧನದ ಚೆಕ್‍ನ್ನು ವಿತರಿಸಿದರು.

ಉಪಾಧ್ಯಕ್ಷ ಮೋನಪ್ಪ ಎನ್.ಬಿ, ನಿರ್ದೇಶಕರುಗಳಾದ ಅಶೋಕ ಪಿ.ಎಂ, ಪ್ರಸನ್ನ ನೆಕ್ಕಿಲ, ಗಾಂಧೀಪ್ರಸಾದ್, ದೀನರಾಜ, ಜಯರಾಮ ಪಿ.ಟಿ, ಶೇಷಪ್ಪ ನಾಯ್ಕ, ಪ್ರಮಿಳಾ ಎನ್., ರೇಣುಕಾ, ಉದಯಕುಮಾರ ಪಿ.ಎ, ಕಿರಣ ಮತ್ತು ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ ಹೆಚ್.ಕೆ. ಉಪಸ್ಥಿತರಿದ್ದರು.