ಚೆಟ್ಟಳ್ಳಿ, ಆ. 20: ಚೆಟ್ಟಳ್ಳಿ ಸಮೀಪ ಬಕ್ಕ ಶ್ರೀಮಂಗಲ ಗ್ರಾಮದ ಪರ್ಲಕೋಟಿ ನಾಗರಾಜು ಎಂಬವರ ಎರಡು ವರ್ಷ ಪ್ರಾಯದ ಏಳು ತಿಂಗಳ ಗರ್ಭಿಣಿ ಹಸುವೊಂದನ್ನು ಕೊಟ್ಟಿಗೆಯಿಂದ ನಿನ್ನೆ ರಾತ್ರಿ ಕಳ್ಳರು ಕದ್ದೊಯ್ದಿದ್ದಾರೆ.

ನಿನ್ನೆ ಸಂಜೆ ಮನೆಯ ಸಮೀಪ ಬಾಣೆಯಲ್ಲಿ ಮೇಯಲು ಬಿಟ್ಟಿದ್ದ ಹಸುವನ್ನು ಇತರ ದನ, ಕರುಗಳ ಜೊತೆಯಲ್ಲಿ ಹೊಡೆದುಕೊಂಡು ಬಂದು ಕೊಟ್ಟಿಗೆಯಲ್ಲಿ ಕಟ್ಟಿ ಅವುಗಳಿಗೆ ಮೇವನ್ನು ಹಾಕಿ ಕೊಟ್ಟಿಗೆಯ ಗೇಟನ್ನು ಹಾಕಿಕೊಂಡು ಬಂದಿದ್ದಾರೆ. ಆದರೆ ಇಂದು ಬೆಳಿಗ್ಗೆ ನೋಡುವಾಗ ಕೊಟ್ಟಿಗೆಯ ಗೇಟನ್ನು ತೆರೆದ ಕಳ್ಳರು ವಯಸ್ಸಾದ ಬೇರೆ ದನ, ಕರುಗಳನ್ನು ಬಿಟ್ಟು ಎರಡು ವರ್ಷ ಪ್ರಾಯದ ಕಪ್ಪು ಬಿಳುಪು ವರ್ಣದ ಗರ್ಭಿಣಿ ಹಸುವನ್ನೇ ಕಳ್ಳತನ ಮಾಡಿದ್ದಾರೆಂದು ನಾಗರಾಜ ಚೆಟ್ಟಳ್ಳಿ ಪೆÇಲೀಸ್ ಉಪಠಾಣೆಗೆ ದೂರು ನೀಡಿದ್ದಾರೆ.