ಗೋಣಿಕೊಪ್ಪ ಟೈಲರ್ ಅಸೋಸಿಯೇಷನ್: ಜಾತಿ, ಧರ್ಮವನ್ನು ಮೀರಿ ಕೆಲಸ ನಿರ್ವಹಿಸುವುದರೊಂದಿದೆ ದೇಶದ ಐಕ್ಯತೆಯನ್ನು ಎತ್ತಿ ಹಿಡಿಯಬೇಕೆಂದು ಗೋಣಿಕೊಪ್ಪ ಪೊಲೀಸ್ ಠಾಣೆಯ ಠಾಣಾಧಿಕಾರಿ ಸುರೇಶ್ ಬೋಪಣ್ಣ ಕರೆ ನೀಡಿದರು.
ಗೋಣಿಕೊಪ್ಪಲುವಿನ ಟೈಲರ್ ಅಸೋಸಿಯೇಷನ್ ವತಿಯಿಂದ ನಗರದ ನೀಲೇಶ್ವರ ಕಾಂಪ್ಲೆಕ್ಸ್‍ನ ಆವರಣದಲ್ಲಿ ಅಸೋಸಿಯೇಷನ್‍ನ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಆಯೋಜನೆಗೊಂಡಿದ್ದ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಇತ್ತೀಚಿನ ದಿನದಲ್ಲಿ ಯುವ ಸಮುದಾಯ ಆದಿ ತಪ್ಪುತ್ತಿದ್ದು ಈ ಬಗ್ಗೆ ಪೋಷಕರು ಹೆಚ್ಚಾಗಿ ಮಕ್ಕಳ ಮೇಲೆ ವಿಶೇಷ ಗಮನ ನೀಡಬೇಕು ಎಂದು ಹೇಳಿದರು.
ಟೈಲರ್ ಅಸೋಸಿಯೇಷನ್ ತಾಲೂಕು ಅಧ್ಯಕ್ಷೆ ಅಬಿಬುನ್ನಿಸಾ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಟೈಲರ್ ಅಸೋಸಿಯೇಷನ್ ಅಧ್ಯಕ್ಷ ಶೇಕ್ ಅಹಮ್ಮದ್ ಮಾತನಾಡಿ, ಇದೆ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಾವೆಲ್ಲರು ಒಂದೆಡೆ ಸೇರುವ ಮೂಲಕ ಒಗ್ಗಟ್ಟನ್ನು ಕಾಪಾಡಿದ್ದೇವೆ. ಒಗ್ಗಟ್ಟು ಎಂದೆಂದಿಗೂ ಮುಂದುವರೆಯಲಿ, ಸರ್ಕಾರ ಕೂಡ ನಮ್ಮ ಸಹಾಯಕ್ಕೆ ನಿಲ್ಲಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲಿಬೆಟ್ಟ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಪುಲಿಯಂಡ ಬೋಪಣ್ಣ ಪಾಲ್ಗೊಂಡಿದ್ದರು. ವೇದಿಕೆಯಲ್ಲಿ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್, ಗೌರವ ಅಧ್ಯಕ್ಷ ಸಾಜಿ ಅಚ್ಚುತ್ತನ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್, ಮೂರ್ನಾಡು ವಲಯ ಅಧ್ಯಕ್ಷ ಸಜೀವನ್, ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಆದಿ ಜಾಂಭವ ಯುವ ಸೇನೆಯ ಜಿಲ್ಲಾಧ್ಯಕ್ಷ ಸತೀಶ್ ಸಿಂಗಿ, ನೀಲೇಶ್ವರ ಕಾಂಪ್ಲೆಕ್ಸ್‍ನ ಮಾಲೀಕರಾದ ಪ್ರಶಾಂತ್, ಲವೀನ್, ನಾಗರಾಜು, ನಾರಾಯಣ, ಸೇರಿದಂತೆ ಅಸೋಸಿಯೇಷನ್ ಪದಾಧಿಕಾರಿಗಳಾದ ಕೃಷ್ಣಕುಮಾರ್, ಲಕ್ಷ್ಮಣ್ ಸೇರಿದಂತೆ ಇನ್ನಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಸೋಸಿಯೇಷನ್‍ನ ಗೋಣಿಕೊಪ್ಪ ಸಂಚಾಲಕ ವಿಭಿಶ್ ಕಾರ್ಯಕ್ರಮ ನಿರೂಪಿಸಿದರು, ಸುನಿತಾ ಸ್ವಾಗತಿಸಿ ಸಿಂಗಿ ಸತೀಶ್ ವಂದಿಸಿದರು.
ಕರಿಕೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕರಿಕೆ ಚೆತ್ತುಕಾಯ ಒಕ್ಕೂಟದ ವತಿಯಿಂದ ಶ್ರಮದಾನ ನಡೆಸಲಾಯಿತು. ಶ್ರೀ ವನಶಾಸ್ತಾವು ದೇವಾಲಯದಲ್ಲಿ ನಡೆದ ಶ್ರಮದಾನದಲ್ಲಿ ಸ್ವಸಹಾಯ ಹಾಗೂ ಪ್ರಗತಿ ಬಂಧು ತಂಡಗಳ ಇಪ್ಪತ್ತಕ್ಕೂ ಅಧಿಕ ಸದಸ್ಯರು ಕಾಡುಕಡಿದು ಸ್ವಚ್ಛತಾ ಕಾರ್ಯ ಮಾಡುವುದರ ಮೂಲಕ ಆಚರಿಸಿದರು. ಪ್ರತಿ ವರ್ಷ ಕೂಡ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸ್ವಚ್ಛತಾ ಕಾರ್ಯ ನಡೆಸಿಕೊಂಡು ಬರುತ್ತಿದೆ. ಕಾರ್ಯಕ್ರಮದಲ್ಲಿ ದೇವಾಲಯ ಆಡಳಿತ ಮಂಡಳಿಯ ಅಧ್ಯಕ್ಷ ಕೆ.ಎ. ನಾರಾಯಣ, ಕಾರ್ಯದರ್ಶಿ ತಾರೇಶ್ ಹೊದ್ದೆಟ್ಟಿ, ಮೇಲ್ವಿಚಾರಕ ಸಂತೋಷ್, ಸೇವಾ ಪ್ರತಿನಿಧಿ ಗಂಗಾಧರ್, ಒಕ್ಕೂಟದ ಅಧ್ಯಕ್ಷ ಬರೆಮನೆ ಜತ್ತಪ್ಪ ಸೇರಿದಂತೆ ಇತರ ಪದಾಧಿಕಾರಿಗಳು ಸದಸ್ಯರು ಹಾಜರಿದ್ದರು.
ಸುನ್ನಿ ಸಂಘಟನೆಗಳಿಂದ ಸ್ವಾತಂತ್ರ್ಯೋತ್ಸವ: 74ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‍ವೈಎಸ್, ಎಸ್‍ಎಸ್‍ಎಫ್, ಎಸ್‍ಜೆಎಂ ಸಂಘಟನೆಗಳ ಸಹಯೋಗದೊಂದಿಗೆ ಕೊಟ್ಟಮುಡಿ ಮರ್ಕಝುಲ್ ಹಿದಾಯದಲ್ಲಿ ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಸೈಯದ್ ಶಿಹಾಬುದ್ದೀನ್ ಅಲ್ ಹೈದರೂಸಿ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಜಿಲ್ಲಾ ನಾಇಬ್ ಖಾಝಿ ಮಹ್ಮೂದ್ ಉಸ್ತಾದ್, ಎಸ್‍ಜೆಎಂ ಜಿಲ್ಲಾಧ್ಯಕ್ಷ ಮುಸ್ತಫಾ ಸಖಾಫಿ, ಎಸ್‍ವೈಎಸ್ ರಾಜ್ಯ ನಾಯಕ ಹನೀಫ್ ಸಖಾಫಿ, ಕೆ.ಎಂ.ಜೆ. ಜಿಲ್ಲಾ ಕಾರ್ಯಾಧ್ಯಕ್ಷ ಊಸುಫ್ ಕೊಂಡಂಗೇರಿ, ಮರ್ಕಜ್‍ನ ವ್ಯವಸ್ಥಾಪಕ ಇಸ್ಮಾಯಿಲ್ ಸಖಾಫಿ, ಮತ್ತಿತರರು ಇದ್ದರು.
ಪಾಲಿಬೆಟ್ಟ ಗ್ರಾ.ಪಂ.: ಪಾಲಿಬೆಟ್ಟ ಗ್ರಾ.ಪಂ. ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜಾರೋಹಣ ಮಾಡುವುದರ ಮೂಲಕ ಆಚರಿಸಲಾಯಿತು. ಕಾರ್ಯದರ್ಶಿ ಗಂಗಮ್ಮ ನೆರವೇರಿಸಿದರು.
ಗ್ರಾ.ಪಂ. ನೌಕರರಾದ ನಿಷ ನಾಯ್ಡು, ಸುಂದರ್, ಸುಬ್ರಮಣಿ, ಸುರೇಶ್, ಲೋಕೇಶ್, ಗೋಪಾಲ, ಮಾಜಿ ಉಪಾಧ್ಯಕ್ಷೆ ನಸೀಮ ಮತ್ತು ಗ್ರಾಮಸ್ಥರಾದ ಪಿ.ಎಂ. ನಸೀರ್ ಮುಂತಾದವರು ಪಾಲ್ಗೊಂಡಿದ್ದರು.ಗೋಣಿಕೊಪ್ಪ ಚೇಂಬರ್ ಆಫ್ ಕಾಮರ್ಸ್: ಗೋಣಿಕೊಪ್ಪಲುವಿನ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ವತಿಯಿಂದ ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಸ್ಥಾನೀಯ ಚೇಂಬರ್ ಅಧ್ಯಕ್ಷ ಕಡೇಮಾಡ ಸುನೀಲ್ ಮಾದಪ್ಪ ಧ್ವಜಾರೋಹಣ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಉಪಾಧ್ಯಕ್ಷ ಪೊನ್ನಿಮಾಡ ಸುರೇಶ್, ಕಾರ್ಯದರ್ಶಿ ತೆಕ್ಕಡ ಕಾಶಿ, ನಿರ್ದೇಶಕರುಗಳಾದ ಕೇಶವ್ ಕಾಮತ್, ಬಿ.ಎನ್. ಪ್ರಕಾಶ್, ಪ್ರಭಾಕರ್ ನೆಲ್ಲಿತ್ತಾಯ, ರಾಜಶೇಖರ್, ಚೇಂದಂಡ ಸುಮಿ ಸುಬ್ಬಯ್ಯ, ಆಲೀರ ಉಮ್ಮರ್, ಹಿರಿಯ ವೈದ್ಯಾಧಿಕಾರಿಗಳಾದ ಡಾ. ಶಿವಪ್ಪ, ಡಾ. ಚಂದ್ರಶೇಖರ್, ಆಸ್ಪತ್ರೆಯ ವೈದ್ಯ ಡಾ. ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.
ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್: ಪಾಲಿಬೆಟ್ಟ ಯಂಗ್ ಇಂಡಿಯಾ ಯೂತ್ ಕ್ಲಬ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಧ್ವಜ ಏರಿಸುವುದರ ಮೂಲಕ ಆಚರಿಸಲಾಯಿತು.
ಧ್ವಜಾರೋಹಣ ಪಿ.ಎಂ. ಹಾರಿಸ್ ನೆರವೇರಿಸಿದರು. ಈ ಸಂದರ್ಭ ಪದಾಧಿಕಾರಿಗಳಾದ ಎಂ.ಬಿ. ಅಬ್ದುಲ್ ನಾಸರ್, ಪಿ.ಎಂ. ನಜೀರ್, ಸಮೀರ್, ಬಸೀರ್, ಕಲೀಲ್, ಫಾರೂಕ್, ಶಾನಿಫ್, ನಿಸ್ತಾರ್ ಇನ್ನಿತರರು ಹಾಜರಿದ್ದರು.
ಅರಮನೆ ಶಾಲೆ: ಸಮೀಪದ ಯವಕಪಾಡಿ ನಾಲ್ಕುನಾಡು ಅರಮನೆ ಬಳಿಯಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಳವಾಗಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಶಿಕ್ಷಕ ಧರ್ಮೇಂದ್ರ, ಎಸ್‍ಡಿಎಂಸಿ ಸದಸ್ಯರು, ಅತಿಥಿ ಶಿಕ್ಷಕರು ಇದ್ದರು.
ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನ: ಗೋಣಿಕೊಪ್ಪಲುವಿನ ಹಿಂದೂ ರುದ್ರಭೂಮಿಯಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ಕಡಿಯುವ ಮೂಲಕ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ವೀರಾಜಪೇಟೆ ತಾಲೂಕಿನ ಬಿಜೆಪಿ ಒಬಿಸಿ ಮೋರ್ಚಾದ ಅಧ್ಯಕ್ಷ ಕೆ. ರಾಜೇಶ್ ಅಧ್ಯಕ್ಷತೆಯಲ್ಲಿ ತಾಲೂಕಿನ ವಿವಿಧ ಭಾಗದ ಪದಾಧಿಕಾರಿಗಳು ಹಾಗೂ ಪಕ್ಷದ ಕಾರ್ಯಕರ್ತರು ಮುಂಜಾನೆ ಮಳೆಯ ನಡುವೆಯೇ ರುದ್ರ ಭೂಮಿಯಲ್ಲಿ ಬೆಳೆದಿದ್ದ ಕಾಡುಗಳನ್ನು ಕಡಿದು ಶ್ರಮದಾನ ಮಾಡಿದರು.
ಈ ಸಂದರ್ಭ ಮಾತನಾಡಿದ ತಾಲೂಕು ಉಪಾಧ್ಯಕ್ಷ ಸುಬ್ರಮಣಿ, ಹಲವು ಸಮಯದಿಂದ ರುದ್ರಭೂಮಿಯಲ್ಲಿ ಕಾಡು ಬೆಳೆದು ನಿಂತಿದೆ. ಸ್ವಾತಂತ್ರ್ಯ ದಿನದಂದು ಇಂತಹ ಪುಣ್ಯ ಕೆಲಸ ಮಾಡುವುದರಿಂದ ಮನಸ್ಸಿಗೆ ಸಮಾದಾನ ತರಲಿದೆ ಎಂಬ ಉದ್ದೇಶದಿಂದ ಈ ರೀತಿಯ ಶ್ರಮದಾನದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದರು. ಶ್ರಮದಾನದಲ್ಲಿ ತಾಲೂಕು ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪೊಟ್ಟಂಡ ಉತ್ತಯ್ಯ, ಕಾರ್ಯದರ್ಶಿ ಸತೀಶ್ ಬಿ.ಎಸ್., ಮರುಳಿ ಮೋಹನ್, ಉಪಾಧ್ಯಕ್ಷ ಸುಬ್ರಮಣಿ, ಸದಸ್ಯರಾದ ಎ.ಕೆ. ರಿನೀಶ್, ಎ.ಕೆ. ಸುಬ್ರಮಣಿ, ಬಿ.ಎಸ್. ಡಾಲಿ ಉಮೇಶ್, ಎಂ.ಎ. ವಿಜು, ವಿವೇಕ್, ಬಿ.ಎ. ಜಗತ್ ತಿಮ್ಮಯ್ಯ, ಕಾರ್ತಿಕ್ ಬಿದ್ದಪ್ಪ, ಗೋಣಿಕೊಪ್ಪ ನಗರ ಒಬಿಸಿ ಅಧ್ಯಕ್ಷ ಸತೀಶ್ ಹೆಚ್.ಸಿ. ಪ್ರಧಾನ ಕಾರ್ಯದರ್ಶಿ ಬಿನೀಶ್, ಉಪಾಧ್ಯಕ್ಷ ಬಿ.ಪಿ. ಶುಭಾಶ್, ಪದಾಧಿಕಾರಿಗಳಾದ ಪ್ರದೀಪ್ ಸಿ.ಎ., ರವಿ, ಕೆ. ಗಜಾನನ, ವಿನೋದ್ ಟಿ.ಜೆ., ಯದುಕುಮಾರ್ ಸೇರಿದಂತೆ ತಾಲೂಕಿನ ವಿವಿಧ ಭಾಗದ ಬಿಜೆಪಿ ಒಬಿಸಿ ಮೋರ್ಚಾದ ಪದಾಧಿಕಾರಿಗಳು ಭಾಗವಹಿಸಿದ್ದರು.ಮಾಲ್ದಾರೆ ಜನಪರ ಸಂಘಟನೆ: ಮಾಲ್ದಾರೆಯ ಜನಪರ ಸಂಘಟನೆ ವತಿಯಿಂದ ಮಾಲ್ದಾರೆ ಜನತಾ ಕಾಲೋನಿಯ ಬಳಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸ್ಥಳೀಯ ಮಾಜಿ ಯೋಧ ಮೇಕೇರಿರ ದಿಲಿ ಧ್ವಜಾರೋಹಣವನ್ನು ನೆರವೇರಿಸಿದರು.
ಈ ಸಂದರ್ಭ ಜನಪರ ಸಂಘದ ಅಧ್ಯಕ್ಷ ಅಂತೋಣಿ, ಸಂಘದ ಪದಾಧಿಕಾರಿಗಳಾದ ಪ್ರವೀಣ್, ವಿನಿಲ್, ಪುನಿತ್, ಆಲಿ, ಅನೀಶ್, ರತೀಶ್, ಗ್ರಾಮದ ಹಿರಿಯರಾದ ಬೋಪಣ್ಣ, ಪ್ರಭಾಕರ್ ಇನ್ನಿತರರು ಹಾಜರಿದ್ದರು. ಕಲಾವಿದ ಬಾವ ಸ್ವಾಗತಿಸಿ, ವಂದಿಸಿದರು. ನಂತರ ನೆರೆದಿದ್ದವರಿಗೆ ಸಿಹಿ ತಿಂಡಿ ವಿತರಿಸಲಾಯಿತು.
ನಾಪೋಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘ: ಸ್ಥಳೀಯ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಾಪೆÇೀಕ್ಲು ಮಾರುಕಟ್ಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವದರ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಪದಾಧಿಕಾರಿಗಳು, ಸದಸ್ಯರು ಇದ್ದರು.
ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ 74ನೇ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು.
ತಿಂಡಿ ವಿತರಿಸಲಾಯಿತು.
ನಾಪೋಕ್ಲು ವಾಹನ ಚಾಲಕರ ಮತ್ತು ಮಾಲೀಕರ ಸಂಘ: ಸ್ಥಳೀಯ ವಾಹನ ಚಾಲಕರ ಮತ್ತು ಮಾಲೀಕರ ಸಂಘದ ವತಿಯಿಂದ ನಾಪೆÇೀಕ್ಲು ಮಾರುಕಟ್ಟೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸುವದರ ಮೂಲಕ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಪದಾಧಿಕಾರಿಗಳು, ಸದಸ್ಯರು ಇದ್ದರು.
ಕರಿಕೆ: ಇಲ್ಲಿಗೆ ಸಮೀಪದ ಚೆತ್ತುಕಾಯ ನ್ಯೂ ಫ್ರೆಂಡ್ಸ್ ಕ್ಲಬ್ ವತಿಯಿಂದ 74ನೇ ಸ್ವಾತಂತ್ರ್ಯ ಉತ್ಸವವನ್ನು ಆಚರಿಸಲಾಯಿತು.
ಆವರಣದಲ್ಲಿ ನಾಪೆÇೀಕ್ಲು ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭ ಶಾಲೆಯ ಪ್ರಾಂಶುಪಾಲೆ ಅವನಿಜಾ ಸೋಮಯ್ಯ, ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಶಿಕ್ಷಕರು ಇದ್ದರು.
ನಾಪೆÇೀಕ್ಲು ಗ್ರಾಮ ಪಂಚಾಯಿತಿ: ನಾಪೆÇೀಕ್ಲು ಗ್ರಾಮ ಪಂಚಾಯಿತಿ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ನಂದಿನಿ, ವಿರನ್, ಕುಟ್ಟಪ್ಪ ಇದ್ದರು.ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷೆ ಸವಿತಾ ಭಟ್ ಧ್ವಜಾರೋಹಣವನ್ನು ಮಾಡಿದರು. ಆಡಳಿತ ಮಂಡಳಿಯ ಸದಸ್ಯೆಯರು ಮತ್ತು ಸಿಬ್ಬಂದಿ ಹಾಜರಿದ್ದರು.
ಅಂಬಟ್ಟಿ-ವೀರಾಜಪೇಟೆ: ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಾಜಿ ಸೈನಿಕ ಮೇಚಂಡ ರಘು ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಶಿಕ್ಷಕಿ ಫಿಲೋಮಿನ, ಹಾಲಿ ಶಿಕ್ಷಕಿ ವನಿತ, ಆಶಾ ಕಾರ್ಯಕರ್ತೆ ಶಾಂತ ಮತ್ತು ಹಳೆ ವಿದ್ಯಾರ್ಥಿಗಳ ಸಂಘದ ಸದ್ಯಸರುಗಳು ಹಾಜರಿದ್ದರು.
ಪೆರಾಜೆ: ಪೆರಾಜೆ ಗ್ರಾಮ ಪಂಚಾಯಿತಿ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಗ್ರಾಮ ಪಂಚಾಯಿತಿ ಆಡಳಿತ ಅಧಿಕಾರಿ ರವಿಕುಮಾರ್ ಧ್ವಜಾರೋಹಣ ಗೈದು, ಧ್ವಜ ವಂದನೆ ಸ್ವೀಕರಿಸಿದರು.
ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹದೇವ ಪ್ರಭು, ಮಾಜಿ ಪಂಚಾಯಿತಿ ಉಪಾಧ್ಯಕ್ಷ ನಂಜಪ್ಪ ನಿಡ್ಯಮಲೆ, ಪಂಚಾಯಿತಿ ಸಿಬ್ಬಂದಿ ಶ್ರೀನಾಥ್ ಪಡುಮಜಲು, ನಾಗೇಶ್ ಕುಂಡಾಡು, ಸುಮ ಸೇರಿದಂತೆ ಗ್ರಾಮದ ಇತರ ಪ್ರಮುಖರು ಹಾಜರಿದ್ದರು.
ಮಡಿಕೇರಿ: ಮಡಿಕೇರಿಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಧ್ವಜಾರೋಹಣ ಮಾಡುವುದರ ಮೂಲಕ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್, ಜಿಲ್ಲಾ ಕಾರ್ಯದರ್ಶಿ ಸತೀಶ್, ಜಿಲ್ಲಾ ವಕ್ತರಾ ಮಹೇಶ್ ಜೈನಿ, ನಗರ ಅಧ್ಯಕ್ಷ ಮನು ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಕೆ.ಯಂ. ಅಪ್ಪಣ್ಣ, ಕಾರ್ಯಾಲಯ ಕಾರ್ಯದರ್ಶಿ ಜಗದೀಶ್, ಮಹಿಳಾ ಮೋರ್ಚಾದ ಸವಿತಾ ರಾಕೇಶ್, ಶ್ವೇತ ಪ್ರಶಾಂತ್, ಎಸ್‍ಸಿ ಮೋರ್ಚಾದ ಗಣೇಶ್, ಎಸ್‍ಪಿ ಮೋರ್ಚಾದ ನಾಗೇಶ್, ರಮೇಶ್ ಕೆ.ಎಸ್. ಪದಾಧಿಕಾರಿಗಳು ಹಾಜರಿದ್ದರು.ಜಂಬೂರು: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಲೇಔಟ್‍ನಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮಾದಾಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಪಂಡ ಉಮೇಶ್ ಉತ್ತಪ್ಪ ಹಾಗೂ ಮಾದಾಪುರ ಎ.ಎಸ್.ಐ. ಪೆÇನ್ನಪ್ಪ, ಮಾದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮಜೀದ್, ಜಂಬೂರಿನ ಇಂಜಿನಿಯರ್ ರಾಜಣ್ಣ, ಸ್ಥಳೀಯರಾದ ಮಧು, ಸಿದ್ದಿಕ್, ಕಾಲಚಂಡ ವಿಜು, ಕಿರಣ್, ಸಂಜಿತ್ ಬಿದ್ರೂಪಣೆ, ನಂದೀಶ್, ಮದನ್ ಹಾಗೂ ಇತರರು ಉಪಸ್ಥಿತರಿದ್ದರು.
ಚೆಟ್ಟಳ್ಳಿ: ಚೆಟ್ಟಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವದ ಶುಭಾಶಯ ತಿಳಿಸಿದರು. ಈ ಸಂದರ್ಭ ಸಂಘದ ನಿರ್ದೇಶಕರುಗಳು ಹಾಗೂ ಸಂಘದ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಮಡಿಕೇರಿ: ಗೌಳೀಬೀದಿಯ ದೇವಶೆಟ್ಟಿ ಕಾಂಪೌಂಡ್‍ನ ಮಕ್ಕಳ ಕೂಟದ ವತಿಯಿಂದ 74ನೇ ಸ್ವಾತಂತ್ರ್ಯ ಉತ್ಸವ ಕಾರ್ಯಕ್ರಮ ನಡೆಯಿತು.
ಮಕ್ಕಳ ಕೂಟದ ಸದಸ್ಯರಾದ ರಿತೇಶ್, ಅಕ್ಷತಾ, ಯಜ್ಞೇಶ್, ಕೃಪಾಲ್, ಗಾನಿಯ, ಭಾರತಿ ರಮೇಶ್ ಹಾಗೂ ಎಲ್ಲಾ ಪೋಷಕರು ಹಾಜರಿದ್ದರು.