ವೀರಾಜಪೇಟೆ: ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಗೆ ಎಸ್.ಎಸ್.ಎಲ್.ಸಿ.ಯಲ್ಲಿ ಶೇ. 100 ರಷ್ಟು ಫಲಿತಾಂಶ ದೊರೆತಿದೆ.
ಸಿ.ಎನ್. ನೂತನ್ 599 (ಶೇ. 95.8) ಆರ್ಯ ಎ.ಬಿ. 571 (ಶೇ. 91.3) ನಿತ್ಯಾ ಎನ್. 569 (ಶೇ. 91.01) ಅಂಕಗಳನ್ನು ಗಳಿಸಿ ಶಾಲೆಗೆ ಪ್ರಥಮ 3 ಸ್ಥಾನಗಳನ್ನು ಗಳಿಸಿದ್ದಾರೆ.
ಶನಿವಾರಸಂತೆ: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ವಿ.ವಿ. ಸೌಜನ್ಯ ಶೇ. 92, ಎನ್.ಪಿ. ಕವನಾ ಶೇ. 87.52, ಸಿ.ಆರ್. ಕೀರ್ತನಾ ಶೇ. 86.4 ಅಂಕ ಪಡೆದು ಪ್ರಥಮ ಮೂರು ಸ್ಥಾನಗಳನ್ನು ಪಡೆದಿದ್ದಾರೆ.
ವೀರಾಜಪೇಟೆ: ವೀರಾಜಪೇಟೆ ಪಟ್ಟಣದ ಕಾವೇರಿ ಶಾಲೆ ಹಾಗೂ ಪ್ರಗತಿ ಶಾಲೆಯು ಈ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡಿವೆ.
ವಿದ್ಯಾರ್ಥಿನಿ ತ್ರಿಷಾ ಕೆ.ಬಿ. ಶೇ. 98 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದರೆ, ಶೇ. 94 ಅಂಕಗಳಿಸಿದ ರಾಶಿ ಮುತ್ತಮ್ಮ ದ್ವಿತೀಯ ಹಾಗೂ ಶೇ. 93 ರಷ್ಟು ಅಂಕಗಳಿಸಿದ ಗಾನವಿ ಬೋಪಣ್ಣ ತೃತೀಯ ಸ್ಥಾನಗಳಿಸಿದ್ದಾರೆ.
ಪಟ್ಟಣದ ಪ್ರಗತಿ ಶಾಲೆಯ ಹನಿಯ ಶೇ. 93 ಅಂಕಗಳಿಸಿ ಪ್ರಥಮ ಸ್ಥಾನ ಪಡೆದರೆ, ಶೇ. 89 ಅಂಕಗಳಿಸಿದ ಶರಣ್ಯ ದ್ವಿತೀಯ ಸ್ಥಾನಗಳಿಸಿದ್ದಾರೆ. ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆ ಶೇ. 88 ರಷ್ಟು ಫಲಿತಾಂಶ ಪಡೆದುಕೊಂಡಿದೆ. ವಿದ್ಯಾರ್ಥಿನಿ ಪಂಚಮಿ ಪಿ.ಎಸ್. ಶೇ. 96.64 ರಷ್ಟು ಅಂಕಗಳಿಸಿ ಪ್ರಥಮ ಸ್ಥಾನ ಪಡೆದರೆ, ಶೇ. 96.48 ಅಂಕಗಳಿಸಿದ ಹೇಮಂತ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪಟ್ಟಣದ ಬ್ರೈಟ್ ಶಾಲೆಯು ಶೇ. 87 ರಷ್ಟು ಫಲಿತಾಂಶವನ್ನು ಪಡೆದುಕೊಂಡಿದೆ.