ಶ್ರೀಮಂಗಲ, ಆ. 20: ದಕ್ಷಿಣ ಕೊಡಗಿನ ಶ್ರೀಮಂಗಲ ಪೆÇಲೀಸ್ ಠಾಣಾ ವ್ಯಾಪ್ತಿಯ ತೆರಾಲು ಗ್ರಾಮದಿಂದ ಕೇರಳಕ್ಕೆ ಅಕ್ರಮವಾಗಿ ವಾಹನ ಮೂಲಕ 6 ಗೋವುಗಳನ್ನು ಸಾಗಿಸುತ್ತಿದ್ದು ಇಬ್ಬರು ಆರೋಪಿಗಳನ್ನು ಶ್ರೀಮಂಗಲ ಪೆÇಲೀಸರು ಬಂಧಿಸಿದ್ದಾರೆ. ವಾಹನ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ಪಿ.ಎಸ್. ಜಿಯಾದ್, ಬಿ. ಭವನ್ ಪೆÇಲೀಸರು ಬಂಧಿಸಿದ್ದು, ಮತ್ತಿಬ್ಬರು ಆರೋಪಿಗಳಾದ ಉಬೈದ್ ನೆಲ್ಲಿಕಾಡು, ಮಾನಂದವಾಡಿಯ ನಿಜಾಸ್ ಅವರು ಪರಾರಿಯಾಗಿದ್ದಾರೆ.

ಶ್ರೀಮಂಗಲ ಜೂನಿಯರ್ ಕಾಲೇಜು ಬಳಿ ಬುಧವಾರ ರಾತ್ರಿ ಪೆÇಲೀಸರ ಕಾರ್ಯಾಚರಣೆ ಸಂದರ್ಭ ಜಾನುವಾರು ಸಾಗಿಸುತ್ತಿದ್ದ ಪಿಕ್‍ಅಪ್ ಜೀಪ್ (ಕೆ.ಎ. 09 ಬಿ 8198), ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಶ್ರೀಮಂಗಲ ಪೆÇಲೀಸ್ ಸಬ್‍ಇನ್ಸ್‍ಪೆಕ್ಟರ್ ಮಂಚಯ್ಯ, ಹೆಡ್‍ಕಾನ್ಸ್‍ಟೇಬಲ್‍ಗಳಾದ ಚಂದ್ರಶೇಖರ್, ಸ್ಟಿಫನ್, ಪೆÇಲೀಸ್ ಕಾನ್ಸ್ ಟೇಬಲ್ ಸುಕುಮಾರ, ಎ.ಪಿ.ಸಿ. ಸಂದೀಪ್ ಪಾಲ್ಗೊಂಡಿದ್ದರು