ಸಿದ್ದಾಪುರ, ಆ. 19: ವೀರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಹೊಸಕೋಟೆ, ಕಳತ್ಮಾಡು, ಹೊಸೂರು ಬೆಟ್ಟಗೇರಿ ಗ್ರಾಮಗಳ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕಾರ್ಯಾಚರಣೆಯು ತಾ. 21 ರಂದು ನಡೆಯಲಿದೆ ಎಂದು ವೀರಾಜಪೇಟೆ ವಲಯ ಉಪ ಅರಣ್ಯ ಅಧಿಕಾರಿ ತಿಳಿಸಿದ್ದಾರೆ. ಆ ದಿನ ಬೆಳಗ್ಗಿನಿಂದ ಸಂಜೆಯವರೆಗೆ ಕಾರ್ಯಾಚರಣೆ ನಡೆಯುವ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಸುತ್ತಮುತ್ತಲಿನ ಕಾಫಿ ತೋಟಗಳ ಕಾರ್ಮಿಕರು, ವಾಹನ ಚಾಲಕರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು ಹಾಗೂ ಕಾರ್ಯಾಚರಣೆಗೆ ಸಹಕಾರ ನೀಡಬೇಕೆಂದು ಉಪ ವಲಯಾರಣ್ಯಾಧಿಕಾರಿ ಮನೋಜ್ ಮನವಿ ಮಾಡಿಕೊಂಡಿದ್ದಾರೆ.