ಮಡಿಕೇರಿ, ಆ. 17: ಜಿಲ್ಲೆಯಲ್ಲಿ ಹೊಸದಾಗಿ 11 ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 1014 ಪ್ರಕರಣಗಳು ವರದಿಯಾಗಿದ್ದು, 725 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 12 ಮಂದಿ ಸಾವನ್ನಪ್ಪಿದ್ದು, 277 ಪ್ರಕರಣಗಳು ಸಕ್ರಿಯವಾಗಿವೆ.

ಕೋವಿಡ್ ಆಸ್ಪತ್ರೆಯಲ್ಲಿ 52 ಮಂದಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 83 ಮಂದಿ, ಹೋಮ್ ಐಸೋಲೇಶನ್‍ನಲ್ಲಿ 142 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 258 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಡಿಕೇರಿ ಗೌಳಿ ಬೀದಿಯ ಹಳೆ ಇಂಡೇನ್ ಗ್ಯಾಸ್ ಕಚೇರಿ ಎದುರಿನ 30 ವರ್ಷದ ಪುರುಷ, ಸೋಮವಾರಪೇಟೆ ಆದರ್ಶ ದ್ರಾವಿಡ ಕಾಲೋನಿಯ 55 ವರ್ಷದ ಪುರುಷ, ಮಡಿಕೇರಿ ಮುತ್ತಪ್ಪ ದೇವಾಲಯ ಬಳಿಯ 47 ವರ್ಷದ ಮಹಿಳೆ, ವೀರಾಜಪೇಟೆ ಐಮಂಗಲ ಕೊಮ್ಮೆತೋಡುವಿನ ಅಂಚೆ ಕಚೇರಿ ಬಳಿಯ 55 ವರ್ಷದ ಮಹಿಳೆ, ಮಡಿಕೇರಿ ಚಾಮುಂಡೇಶ್ವರಿ ನಗರದ ಅಂಗನವಾಡಿ ಬಳಿಯ 15 ವರ್ಷದ ಬಾಲಕ, ಮಡಿಕೇರಿ ಮಹದೇವಪೇಟೆ ಬಳಿಯ 50 ವರ್ಷದ ಪುರುಷ, ಕುಶಾಲನಗರ ನಿಜಾಮುದ್ದೀನ್ ಲೇಔಟಿನ 37 ಮತ್ತು 40 ವರ್ಷದ ಮಹಿಳೆ, ಮಡಿಕೇರಿ ಮಾರ್ಕೆಟ್ ರಸ್ತೆಯ ನಗರ ಆರೋಗ್ಯ ಕೇಂದ್ರ ಬಳಿಯ 62 ವರ್ಷದ ಪುರುಷ, ಮಡಿಕೇರಿ ಕನಕದಾಸ ರಸ್ತೆಯ ರಾಯಲ್ ಬಿರಿಯಾನಿ ಹೊಟೇಲ್ ಬಳಿಯ 17 ವರ್ಷದ ಪುರುಷ, ಕುಶಾಲನಗರ ಸಿದ್ದಯ್ಯ ಪುರಾಣಿಕ್ ಬಡಾವಣೆಯ 5 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದೆ.