ಸಿದ್ದಾಪುರ, ಆ. 18: ಸಿದ್ದಾಪುರ ಪಟ್ಟಣದ ಬಳಿ ಸೋಮವಾರ ರಾತ್ರಿ ಸರಣಿ ಕಳ್ಳತನ ನಡೆದಿದ್ದು, ಸಿದ್ದಾಪುರದ ಮೈಸೂರು ರಸ್ತೆಯಲ್ಲಿ ವಾಸವಿರುವ ಸಲ್ಮಾನ್ ರಶೀದ್ ಎಂಬವರಿಗೆ ಸೇರಿದ ಎಸ್ಟಿಮ್ ಕಾರನ್ನು (ಕೆಎ 05 ಎಂಇ 3668) ಮನೆಯ ಮುಂಭಾಗದಲ್ಲಿ ನಿಲ್ಲಿಸಿದ್ದು, ಸೋಮವಾರ ರಾತ್ರಿ ಕಳವು ಮಾಡಲಾಗಿದೆ.
ಇದಲ್ಲದೇ ಸಿದ್ದಾಪುರದ ಕರಡಿಗೋಡು ನಿವಾಸಿ ಸ್ಟ್ಯಾಂನ್ಲಿ ಎಂಬವರಿಗೆ ಸೇರಿದ ಆಟೋರಿಕ್ಷಾವನ್ನು (ಎಂ 12 ಬಿ 4145)ರ ಸಿದ್ದಾಪುರ ಮೈಸೂರು ರಸ್ತೆಯ ಮುಲ್ಲೆತೋಡು ಬಳಿ ನಿಲ್ಲಿಸಲಾಗಿದ್ದು, ಈ ಆಟೋರಿಕ್ಷಾದಲ್ಲಿ ಅಳವಡಿಸಿದ್ದ ಟೇಪ್ ರೆಕಾರ್ಡ್, ಸ್ಟೆಪ್ನಿ ಟಯರ್ ಹಾಗೂ ಬ್ಯಾಟರಿಯನ್ನು ಕಳವು ಮಾಡಲಾಗಿದೆ. ಅಲ್ಲದೆ ಇಸ್ಮಾಯಿಲ್ ಎಂಬವರ ಮಿನಿ ಲಾರಿಯಲ್ಲಿ ಕೂಡ ಕಳ್ಳತನ ಮಾಡಲು ಕಳ್ಳರು ಯತ್ನಿಸಿ ವಿಫಲರಾಗಿದ್ದಾರೆ. ಈ ಪ್ರಕರಣಗಳ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಿದ್ದಾಪುರ ಠಾಣಾಧಿಕಾರಿ ಮೋಹನ್‍ರಾಜ್ ತನಿಖೆ ಕೈಗೊಂಡಿದ್ದಾರೆ.