ವೀರಾಜಪೇಟೆ, ಆ. 17: ದಕ್ಷಿಣಕೊಡಗಿನ ಹಾತೂರು, ತಿತಿಮತಿ ಸೇರಿದಂತೆ ವಿವಿಧೆಡೆಗಳಿಂದ ಹುಲ್ಲು ತುಂಬಿಸಿಕೊಂಡು ಕೇರಳದ ಕಡೆಗೆ ಹೊರಟಿದ್ದ ಮಿನಿ ಲಾರಿ (ಕೆ.ಎಲ್. 58 ಎಎ 8661) ಬಿಟ್ಟಂಗಾಲದಿಂದ ಪೆರುಂಬಾಡಿಗೆ ಹೋಗುವ ಬಾಳುಗೋಡಿನಲ್ಲಿ ರಸ್ತೆಯ ಬದಿಗೆ ಮಗುಚಿಕೊಂಡಿದೆ.

ಮಿನಿಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸರಕು ಸಾಗಾಣಿಕೆ ಸೇರಿದಂತೆ ಇತರ ಎಲ್ಲ ವಾಹನಗಳಿಗೆ ಕೊಡಗು ಕೇರಳ ಅಂತರರಾಜ್ಯ ಸಂಪರ್ಕಿಸುವ ರಾಜ್ಯ ಹೆದ್ದಾರಿಯ ಪೆರುಂಬಾಡಿ ಚೆಕ್‍ಪೋಸ್ಟ್‍ನ ಬಂದ್ ತೆರವುಗೊಂಡ ನಂತರ ಎಲ್ಲ ವಾಹನಗಳು ನಿರಂತರವಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ.