ಮಡಿಕೇರಿ, ಆ. 17: ಸೋಮವಾರಪೇಟೆ ತಾಲೂಕು ತೋಟಗಾರಿಕಾ ಅಧಿಕಾರಿ ಶೋಭಾ ಅವರು ತಾ. 18 ರಂದು (ಇಂದು) ಬೆಳಿಗ್ಗೆ 10.30 ಗಂಟೆಗೆ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರು ಹಾಗೂ ಬೆಳೆಗಾರರಿಂದ ಮಳೆಹಾನಿಗೆ ಸಂಬಂಧಿಸಿದಂತೆ ಅರ್ಜಿ ಸ್ವೀಕರಿಸಲಿದ್ದಾರೆ ಎಂದು ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ತಿಳಿಸಿದ್ದಾರೆ.
ಚೆಟ್ಟಳ್ಳಿ, ವಾಲ್ನೂರು ತ್ಯಾಗತ್ತೂರು ಮತ್ತು ನೆಲ್ಯಹುದಿಕೇರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮಳೆಯಿಂದ ಉಂಟಾದ ತೋಟಗಾರಿಕಾ ಬೆಳೆಗಳ ಹಾನಿಯ ಬಗ್ಗೆ ಪರಿಹಾರಕ್ಕಾಗಿ ಮಾಹಿತಿ ಸಹಿತ ಅರ್ಜಿ ಸಲ್ಲಿಸಬಹುದಾಗಿದೆ.