ಗೋಣಿಕೊಪ್ಪ ವರದಿ, ಆ. 16: ಕೊರೊನಾದಿಂದ ತಾಯಿ ಕ್ವಾರಂಟೈನ್‍ನಲ್ಲಿರುವುದರಿಂದ ಮಕ್ಕಳ ಪಾಲನೆಗೆ ಯಾರೂ ಇಲ್ಲದೆ ಅಗತ್ಯ ವಸ್ತುಗಳ ನಿರೀಕ್ಷೆಯಲ್ಲಿದ್ದಾರೆ.

ಬೆಕ್ಕೆಸೊಡ್ಲೂರು ಸ್ಪೋಟ್ರ್ಸ್ ಕ್ಲಬ್ ಸಮೀಪದ ರಸ್ತೆಯಲ್ಲಿರುವ ರಾಮಕಾಲೋನಿಯ ಇಬ್ಬರು ಮಕ್ಕಳಿಗೆ ಅಗತ್ಯ ವಸ್ತು, ಆಹಾರದ ಅವಶ್ಯಕತೆ ಇದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಸ್ಥಳೀಯವಾಗಿ ಒಂದೆರಡು ಜನರು ಸಹಕಾರ ನೀಡಿದ್ದರೂ ಮಕ್ಕಳಿಗೆ ಯಾರೂ ಸಂಬಂದಿಕರು ಇಲ್ಲದೆ ತೊಂದರೆಯಾಗಿದೆ. ಕಾನೂರು ಗ್ರಾಮ ಪಂಚಾಯಿತಿ ಕೂಡ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೂಡ ವ್ಯಕ್ತವಾಗಿದೆ.