ಮಡಿಕೇರಿ, ಆ. 16: ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಸೂರ್ಲಬ್ಬಿಯಲ್ಲಿ ಅಕ್ರಮ ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಆರೋಪ ಮೇರೆಗೆ ಜಿ. ಪಟ್ಟು ಎಂಬಾತನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಪೊಲೀಸ್ ಠಾಣಾಧಿಕಾರಿ ಸೋಮವಾರಪೇಟೆ ಠಾಣೆಯ ಶಿವಶಂಕರ್ ಹಾಗೂ ಸಿಬ್ಬಂದಿ 6 ಲೀ.ನಷ್ಟು ಕಳ್ಳಭಟ್ಟಿ ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.