ನಾಪೆÇೀಕ್ಲು, ಆ. 14: ಬೆಂಗಳೂರಿನಲ್ಲಿ ಎಸ್‍ಡಿಪಿಐ ಸಂಘಟನೆಯ ಕಾರ್ಯಕರ್ತರಿಂದ ಶಾಸಕರ ಹಾಗೂ ಪೆÇಲೀಸ್ ಇಲಾಖೆಯ ವಿರುದ್ಧ ನಡೆದ ಧಾಂದಲೆ ಪ್ರಕರಣವನ್ನು ಖಂಡಿಸಿ ನಾಪೆÇೀಕ್ಲುವಿನಲ್ಲಿ ಭಜರಂಗದಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಎಸ್‍ಡಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಎಸ್‍ಡಿಪಿಐ ಸಂಘಟನೆಯನ್ನು ನಿಷೇಧಿಸುವಂತೆ ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಬೆಂಗಳೂರಿನಲ್ಲಿ ನಡೆದ ಘಟನೆಗೆ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದರು.

ಪ್ರತಿಭಟನೆಯಲ್ಲಿ ನಾಪೆÇೀಕ್ಲು ಭಜರಂಗದಳದ ಅಧ್ಯಕ್ಷ ಬಿ.ಎಂ.ಪ್ರತೀಪ್, ಮುಖಂಡರಾದ ಕಂಗಾಂಡ ಜಾಲಿ ಪೂವಪ್ಪ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಜಗದೀಶ್, ಕೇಲೇಟಿರ ದೀಪು ದೇವಯ್ಯ, ಚೀಯಕಪೂವಂಡ ಸತೀಶ್ ದೇವಯ್ಯ, ಚೋಕಿರ ಪ್ರಭು ಪೂವಪ್ಪ, ಕರವಂಡ ಅಪ್ಪಣ್ಣ, ಕುಟ್ಟಂಜೆಟ್ಟಿರ ಪೂಣಚ್ಚ, ಕುಂಡ್ಯೋಳಂಡ ಸಂಪತ್ತು, ಕೇಲೇಟಿರ ಸಾಬು ನಾಣಯ್ಯ, ಚೋಕಿರ ಸಜಿತ್, ಮತ್ತಿತರರು ಇದ್ದರು.