ಮಡಿಕೇರಿ, ಆ.14 : ತಲಕಾವೇರಿ ಕ್ಷೇತ್ರದಲ್ಲಿ ಕಳೆದ ಆರು ದಶಕಗಳಿಂದ ಪೂಜಾ ಕೈಂಕರ್ಯಗಳನ್ನು ನಿಷ್ಕಳಂಕವಾಗಿ ನಡೆಸುತ್ತಾ ಬಂದಿದ್ದ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ತೇಜೋವಧೆ ಖಂಡನಾರ್ಹ ವೆಂದು ಬೇಸರ ವ್ಯಕ್ತಪಡಿಸಿರುವ ತಲಕಾವೇರಿ-ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಮನುಮುತ್ತಪ್ಪ ಅವರು, ಅಪಪ್ರಚಾರದ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳು ಅಡಗಿವೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಲಕಾವೇರಿ ಕ್ಷೇತ್ರದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಗಳಿಂದ ಮಳೆಗಾಳಿ, ಬಿಸಿಲನ್ನು ಲೆಕ್ಕಿಸದೆ ಕಾವೆÉೀರಿಯ ಸೇವೆಗೆ ತಮ್ಮನ್ನು ಮುಡಿಪಾಗಿಟ್ಟಿದ್ದ ನಾರಾಯಣಾಚಾರ್ ಅವರ ವಿರುದ್ಧ, ಅವರ ಮರಣಾ ನಂತರ ಕೀಳು ಮಟ್ಟದ ಹೇಳಿಕೆಗಳನ್ನು ನೀಡುತ್ತಿರು ವುದು ತಲಕಾವೇರಿಯ ಕ್ಷೇತ್ರಕ್ಕೆ ಶೋಭೆ ತರುವುದಿಲ್ಲವೆಂದರು.
ಗುಡ್ಡ ಕುಸಿತದಿಂದ ನಾರಾಯ ಣಾಚಾರ್ ಕುಟುಂಬ ದುರ್ಮರಣಕ್ಕೀ ಡಾದ ಹಂತದಲ್ಲಿ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅವರ ತೇಜೋವಧೆ ಮಾಡುವ ರೀತಿಯ ಹೇಳಿಕೆಗಳನ್ನು ನೀಡಿರುವುದನ್ನು ಖಂಡಿಸುವುದಾಗಿ ತಿಳಿಸಿದ ಮನುಮುತ್ತಪ್ಪ್ಪ ಅವರು ಸೂತಕದ ಮನೆಯಲ್ಲಿ ಸಂಭ್ರಮಾಚರಣೆ ಯಾವತ್ತಿಗೂ ಒಳ್ಳೆಯದಲ್ಲವೆಂದರು.
ತಲಕಾವೇರಿ ಕ್ಷೇತ್ರದ ಬಗ್ಗೆ ಮತ್ತು ಅಲ್ಲಿ ಸೇವೆ ಸಲ್ಲಿಸಿದ ಅರ್ಚಕರ ಕುರಿತು ಜ್ಞಾನವಿಲ್ಲದ ಮಂದಿ ಹೇಳಿಕೆ ಗಳನ್ನು ನೀಡುವುದನ್ನು ಇನ್ನಾದರು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ನಾರಾಯಣಾಚಾರ್ ಅವರು ತಲಕಾವೇರಿ, ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಪ್ರಥಮ ಅಧ್ಯಕ್ಷರಾಗಿ, ಭಾಗಮಂಡಲ ವಿಎಸ್‍ಎಸ್‍ಎನ್ ಅಧ್ಯಕ್ಷರಾಗಿ, ಏಲಕ್ಕಿ ಸಹಕಾರ ಸಂಘದ ಅಧ್ಯಕ್ಷರಾಗಿ, ಮಡಿಕೇರಿ ಜನತಾ ಬಜಾರ್ ನಿರ್ದೇಶಕರಾಗಿ, ಭಾಗಮಂಡಲ ಕಾವೇರಿ ಶಾಲೆಯ ನಿರ್ದೇಶಕರಾಗಿ, ಸಂಬಾರ ಮಂಡಳಿಯ ನಿರ್ದೇಶಕ ರಾಗಿ ಜನಪರವಾದ ಸೇವೆ ಸಲ್ಲಿಸಿದ್ದರು. ಅಲ್ಲದೆ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಮೂಲಕ ಮಡಿಕೆÉೀರಿ ತಾಲೂಕು ಶ್ರೇಷ್ಠ ಸಹಕಾರಿ ಪ್ರಶಸ್ತಿಗೂ ಭಾಜನರಾಗಿದ್ದರು ಎಂದು ಮನು ಮುತ್ತಪ್ಪ ನೆನಪು ಮಾಡಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಭಾಗಮಂಡಲ ಗಿರಿಜನ ಸಹಕಾರ ಸಂಘದ ನಿರ್ದೇಶಕ ರಂಜಿತ್, ಭಾಗಮಂಡಲ ನಿವಾಸಿಗಳಾದ ಪದ್ಮಯ್ಯ, ಪಾಡಿಯಮ್ಮನ ಮನು ಮಹೇಶ್ ಹಾಗೂ ಜಿಜೆಪಿ ಪ್ರಮುಖ ಕಾಳನ ರವಿ ಉಪಸ್ಥಿತರಿದ್ದರು.