ಕಣಿವೆ, ಆ.14: ಚಿಕ್ಲಿಹೊಳೆ ಜಲಾಶಯದ ನೀರನ್ನು ರೈತರ ಅಚ್ಚುಕಟ್ಟು ಜಮೀನಿಗೆ ಹರಿಸದೇ ಕಾವೇರಿ ನದಿಗೆ ಹರಿಸಲಾಗುತ್ತಿದೆ ಎಂದು ಚಿಕ್ಲಿಹೊಳೆ ಅಚ್ಚುಕಟ್ಟು ವ್ಯಾಪ್ತಿಯ ರೈತರು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರೈತರ ಒತ್ತಾಯದ ಮೇರೆಗೆ ಶಾಸಕ ಅಪ್ಪಚ್ಚು ರಂಜನ್ ಕಳೆದ ನಾಲ್ಕು ದಿನಗಳ ಹಿಂದೆ ಈ ನಾಲಾ ಪ್ರದೇಶಗಳಿಗೆ ಭೇಟಿ ಕೊಟ್ಟಾಗ ನಿಗಮದ ಅಧಿಕಾರಿಗಳು ಚಿಕ್ಲಿಹೊಳೆ ನಾಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಇರುವುದು ಗೋಚರಿಸಿತು. ಜೊತೆಗೆ ಅಚ್ಚುಕಟ್ಟು ರೈತರು ಅನುಭವಿಸುತ್ತಿರುವ ಯಾತನೆಗಳನ್ನು ಖುದ್ದಾಗಿ ಆಲಿಸಿದ ಶಾಸಕ ರಂಜನ್, ರೈತರ ಸಮ್ಮುಖ ದಲ್ಲಿ ನಿಗಮದ ಅಧಿಕಾರಿಗಳಿಗೆ ಮೊಬೈಲ್ ಮೂಲಕ ಮಾತನಾಡಿ, ಚಿಕ್ಲಿಹೊಳೆ ನಾಲೆಗಳಿಂದ ರೈತರ ಜಮೀನಿಗೆ ಸರಿಯಾಗಿ ನೀರು ಹರಿಯುತ್ತಿಲ್ಲ ಮತ್ತು ನಾಲೆಯ ತಳಭಾಗದಲ್ಲಿ ವಾಸವಿರುವ ರೈತರ ಮನೆಗಳಿಗೆ ನೀರು ಆವರಿಸಿ ಶೀತಪೀಡಿತವಾಗಿದ್ದಾರೆ.

ಕೂಡಲೇ ಪೆÇೀಲಾಗುತ್ತಿರುವ ನೀರನ್ನು ತಡೆಯುವ ಕೆಲಸವಾಗಬೇಕು. ಮತ್ತು ರೈತರಿಗೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ತುರ್ತು ಕಾಮಗಾರಿಗಳನ್ನು ಕೈಗೊಳ್ಳಬೇಕೆಂದು ಸೂಚಿಸಿದ ಮೇರೆಗೆ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್ ಮತ್ತು ಸಹಾಯಕ ಅಭಿಯಂತರ ಕಿರಣ್ ಸ್ಥಳಕ್ಕೆ ಧಾವಿಸಿದ ಸಂದರ್ಭದಲ್ಲಿ ರೈತಮುಖಂಡ ಆರ್.ಕೆ. ಚಂದ್ರು ನೇತೃತ್ವದ ರೈತರ ಗುಂಪು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿತು. ಈ ಸಂದರ್ಭ ಪ್ರತಿಕ್ರಿಯಿಸಿದ ಅಭಿಯಂತರ ಮಹೇಂದ್ರಕುಮಾರ್, ನಾನು ಈಗ ಕೆಲವು ದಿನಗಳ ಹಿಂದಷ್ಟೇ ಈ ವಿಭಾಗಕ್ಕೆ ಬಂದಿರುವುದರಿಂದ ಸ್ಥಳ ಸಮೀಕ್ಷೆ ಮಾಡಿ ಸಮಸ್ಯೆಗಳನ್ನು ಬಗೆಹರಿಸಲು ವಿಳಂಬವಾಗಿದೆ. ಆದರೂ ಹಂತ ಹಂತವಾಗಿ ಸಮಸ್ಯೆ ಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು. ಸುದ್ದಿಗಾರರ ಜೊತೆ ಮಾತನಾಡಿದ ರೈತ ಮುಖಂಡ ಹಾಗೂ ಬಸಬನಹಳ್ಳಿ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಆರ್.ಕೆ.ಚಂದ್ರು, ಚಿಕ್ಲಿಹೊಳೆ ರೈತರ ಪಾಲಿಗೆ ಶಾಪಗ್ರಸ್ಥವಾದ ಯೋಜನೆ. ಕೂಡಲೇ ಮುಖ್ಯ ಕಾಲುವೆಯಲ್ಲಿ ಹೂಳು ತೆಗೆದು ಕಾಡು ಕಡಿದು ಶಾಶ್ವತವಾದ ಕಾಂಕ್ರೀಟ್ ಲೈನಿಂಗ್ ಮಾಡಬೇಕು. ಏಕೆಂದರೆ ಮುಖ್ಯ ನಾಲೆಯ ಎರಡು ಕಿ.ಮೀ ನಂತರದ ಉದ್ದಕ್ಕೂ ಅಂಬಾಕ್ ಮೆಂಟ್ ನಿರ್ಮಿಸಿರುವ ಕಡೆಗಳಲ್ಲಿ ಏಡಿಗಳು ಕೊರೆದು ನೀರೆಲ್ಲಾ ಪೆÇೀಲಾಗುತ್ತಿದೆ. ಆ ನೀರಿನಿಂದ ಇಲ್ಲಿನ ನಾಲಾ ಅಂಚಿನಲ್ಲಿರುವ ತಗ್ಗುಪ್ರದೇಶದ ಮಾಚಯ್ಯ, ಪೂವಯ್ಯ, ಪೆÇನ್ನಪ್ಪ, ಸೋಮಣ್ಣ ಮೊದಲಾದವರ ಮನೆಗಳ ಗೋಡೆಗಳು ಶೀತಕ್ಕೆ ಸಿಲುಕಿ ಬೀಳುವ ಹಂತಕ್ಕೆ ತಲುಪಿವೆ ಎಂದರು.

ನಂತರ ನಿಗಮದ ಅಧಿಕಾರಿ ಎಇಇ ಮಹೇಂದ್ರಕುಮಾರ್ ‘ಶಕ್ತಿ’ ಯೊಂದಿಗೆ ಮಾತನಾಡಿ, ಚಿಕ್ಲಿಹೊಳೆ ಜಲಾಶಯದಿಂದ ಮೂರು ಕಾಲುವೆಗಳಿವೆ. ಅದರಲ್ಲಿ ಬಲದಂಡೆ ಕಾಲುವೆ 11 ಕಿಮೀ ತನಕ ವಿದ್ದು 442 ಎಕರೆ ಭೂಮಿಗೆ ನೀರು ಹರಿಸುತ್ತದೆ. ಎಡದಂಡೆ ಕಾಲುವೆಯ ಹೊಸ ಕಾಲುವೆ 29 ಕಿಮೀ ದೂರವಿದ್ದು 1060 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸುತ್ತಿದೆ. ಇನ್ನು ಹಳೆಯ ಕಾಲುವೆ 635 ಎಕರೆಗೆ ಮಾತ್ರ ನೀರುಣಿಸುತ್ತಿದೆ. ನಾಲೆಗಳ ಆಧುನೀಕರಣ ವಾಗದೇ ನೀರನ್ನು ಸರಾಗವಾಗಿ ಹರಿಸಲು ಕಷ್ಟÀ್ಟವಾಗುತ್ತದೆ. ಮುಂದಿನ ಮುಂಗಾರು ವೇಳೆಗೆ ಈಗ ಇರುವ ಸಮಸ್ಯೆಗಳನ್ನು ಪ್ರಾಮಾಣಿಕ ವಾಗಿ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಎರಡೂವರೆ ಲಕ್ಷ ವೆಚ್ಚದಲ್ಲಿ ಹೂಳು ತೆಗೆಯುತ್ತಿದ್ದು ಸರಿಯಾಗಿ ಕೆಲಸವಾಗುತ್ತಿಲ್ಲ ಎಂದು ರೈತರು ಅಧಿಕಾರಿಗಳಿಗೆ ದೂರಿದರು.

-ಕೆ.ಎಸ್.ಮೂರ್ತಿ