ಗೋಣಿಕೊಪ್ಪಲು, ಆ. 13: ಕುಟ್ಟ ಸುತ್ತುಮುತ್ತಲ ಗ್ರಾಮಗಳ ರೈತರ ಆರ್ಥಿಕ ಸುಧಾರಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೈನುಗಾರಿಕೆಯ ಪೂರ್ಣ ಲಾಭ ಪಡೆಯಲು ಸಹಕಾರಿಯಾಗುವಂತೆ ಕುಟ್ಟಾದ ಅನುಗ್ರಹ ಹೆಚ್‍ಪಿ ಪೆಟ್ರೋಲಿಯಂನ ಸಹಕಾರದೊಂದಿಗೆ ‘ಹಾಲು ಉತ್ಪಾದನೆ ಮತ್ತು ಮಾರುಕಟ್ಟೆ’ ಕುರಿತು ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸ್ವಾತಂತ್ರೋತ್ಸವ ಪ್ರಯುಕ್ತ ತಾ. 15 ರಂದು ಬೆಳಿಗ್ಗೆ 10.30ಕ್ಕೆ ಏರ್ಪಡಿಸಿದ್ದು, ಅಮ್ಮತಿ ನಾಡು ಹಾಲು ಉತ್ಪಾದಕರ ಸಂಘದ ನಿಯೋಜಿತ ಅಧ್ಯಕ್ಷ ತುಷಾರ್ ಕುಲಕರ್ಣಿ ಮಾತನಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪೆÇನ್ನಂಪೇಟೆಯ ಶ್ರೀ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಸ್ವಾಮಿ ಬೋಧಸ್ವರೂಪಾನಂದಜೀ ಮಹರಾಜ್ ವಹಿಸಲಿದ್ದಾರೆ. ಹಣಕಾಸು ವ್ಯವಸ್ಥೆ, ಸಾಲ ಸೌಲಭ್ಯದ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ. ಇದರ ಸದುಪಯೋಗವನ್ನು ಕುಟ್ಟ ಸುತ್ತಮುತ್ತಲಿನ ಗ್ರಾಮದ ರೈತರು ಪಡೆದುಕೊಳ್ಳಲು ಅನುಗ್ರಹ ಪೆಟ್ರೋಲಿಯಂನ ಚಂದನ್ ಕಾಮತ್ ಕೋರಿದ್ದಾರೆ.