ಮಡಿಕೇರಿ, ಆ. 13: ನರಿಯಂದಡ ಗ್ರಾಮದಲ್ಲಿರುವ ನರಿಯಂದಡ ಆಂಗ್ಲ ಮಾಧ್ಯಮ ಶಾಲೆ, ನರಿಯಂದಡ ಚೆಯ್ಯಂಡಾಣೆ ಇವರು 2020-21ನೇ ಸಾಲಿನಿಂದ ವಿದ್ಯಾಸಂಸ್ಥೆ ಮುಚ್ಚಿದ್ದಾರೆ. ಇದರಿಂದಾಗಿ ಈ ವಿದ್ಯಾ ಸಂಸ್ಥೆಯ ಮಾನ್ಯತೆಯನ್ನು 2020-21ನೇ ಸಾಲಿನಿಂದ ರದ್ದುಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ತಿಳಿಸಿದ್ದಾರೆ.

2020-21ನೇ ಸಾಲಿನಿಂದ ಈ ವಿದ್ಯಾ ಸಂಸ್ಥೆಯವರು ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಬಾರದು ಹಾಗೂ ಪೋಷಕರು ನರಿಯಂದಡ ಆಂಗ್ಲ ಮಾಧ್ಯಮ ಶಾಲೆ ಚೆಯ್ಯಂಡಾಣೆ ಸಂಸ್ಥೆಗೆ ತಮ್ಮ ಮಕ್ಕಳನ್ನು ದಾಖಲಾತಿ ಮಾಡಬಾರದು. ವಿದ್ಯಾಸಂಸ್ಥೆಗೆ ಪೋಷಕರು ವಿದ್ಯಾರ್ಥಿಗಳನ್ನು ದಾಖಲಿಸಿದ್ದಲ್ಲಿ ಮತ್ತು ವಿದ್ಯಾಸಂಸ್ಥೆ ಅವರು ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡಲ್ಲಿ ಮುಂದಿನ ಆಗು ಹೋಗುಗಳಿಗೆ ಸಂಬಂಧಿಸಿದವರೆ ನೇರ ಜವಾಬ್ದಾರರಾಗಿರುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.