ಆರು ಮಂದಿ ವಿರುದ್ಧ ಪ್ರಕರಣ ದಾಖಲು ಮಡಿಕೇರಿ, ಆ. 13: ಇತ್ತೀಚೆಗೆ ಅಯೋಧ್ಯೆಯಲ್ಲಿ ನಡೆದ ರಾಮಮಂದಿರ ಭೂಮಿಪೂಜೆ ದಿನದಂದು ನಗರದ ಕನಕದಾಸ ರಸ್ತೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಬರಹಗಳನ್ನು ಒಳಗೊಂಡ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಆರೋಪದಡಿ ಆರು ಮಂದಿ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕನಕದಾಸ ರಸ್ತೆಯಲ್ಲಿರುವ ಅಂಗಡಿಯೊಂದರ ಮುಂಭಾಗದ ರಸ್ತೆಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಆರೋಪ (ಮೊದಲ ಪುಟದಿಂದ) ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗುವಂತಹ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ ಆರೋಪದಡಿ ಅಬ್ದುಲ್ ಅಡ್ಕರ್, ಮನ್ಸೂರ್, ವಕೀಲ ಅಬೂಬಕರ್, ಮುಸ್ತಫಾ, ತೈಸೀರ್ ಹಾಗೂ ಪೀಟರ್ ಎಂಬವರುಗಳ ವಿರುದ್ಧ ದೂರು ದಾಖಲಾಗಿದೆ. ಭಿತ್ತಿಪತ್ರದ ಕೆಳಗೆ ಎಸ್.ಡಿ.ಪಿ.ಐ. ಎಂದು ನಮೂದಿಸಲಾಗಿತ್ತು.