ಮಡಿಕೇರಿ, ಆ. 13: ಪ್ರಸಕ್ತ ವರ್ಷದಲ್ಲಿ ಮಳೆಯಿಂದ ಇದುವರೆಗೆ ಸಾವು-ನೋವು, ಭೂಕುಸಿತ-ಮನೆಗಳ ಕುಸಿತದಂತಹ ಸಾಕಷ್ಟು ಅವಾಂತರಗಳು ಜಿಲ್ಲೆಯಲ್ಲಿ ಸಂಭವಿಸಿದೆ. ವಾಯು-ವರುಣನ ಆರ್ಭಟ ಜಿಲ್ಲೆಯ ಜನರ ನಿದ್ದೆಗೆಡುವಂತೆ ಮಾಡಿದ್ದರೂ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮಳೆಯ ಪ್ರಮಾಣ ಜಿಲ್ಲೆಯಲ್ಲಿ ಕಡಿಮೆಯಾಗಿದೆ!ಆಶ್ಚರ್ಯವೆನಿಸಿದರೂ ಇದು ವಾಸ್ತವ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ 72.73 ಇಂಚು ಮಳೆಯಾಗಿತ್ತು.ಮಳೆ-ಆರ್ಭಟ ಹೆಚ್ಚು ; ಪ್ರಮಾಣ ಕಡಿಮೆ...! (ಮೊದಲ ಪುಟದಿಂದ) ಆದರೆ ಈ ಬಾರಿ ಇಲ್ಲಿಯವರೆಗೆ 68.56 ಇಂಚು ಮಾತ್ರ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ 0.36 ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ದಿನ 0.82 ಇಂಚು ಮಳೆ ಸುರಿದಿತ್ತು. ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 0.53 ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ದಿನ 1.80 ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 98.45 ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ಅವಧಿಯಲ್ಲಿ 95.50 ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿನಲ್ಲಿ ಇಂದು 0.06 ಇಂಚು ಮಳೆ ಸುರಿದಿದ್ದು, ಕಳೆದ ಬಾರಿ ಇದೇ ದಿನ 0.14 ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 61.82 ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ಅವಧಿಗೆ 74.34 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಇಂದು 0.49 ಇಂಚು ಮಳೆಯಾಗಿದ್ದರೆ ಕಳೆದ ಬಾರಿ ಇದೇ ದಿನ 0.52 ಇಂಚು ಮಳೆಯಾಗಿತ್ತು. ಜನವರಿಯಿಂದ ಇಲ್ಲಿಯವರೆಗೆ 45.41 ಇಂಚು ಮಳೆಯಾಗಿದ್ದು, ಕಳೆದ ಬಾರಿ ಇದೇ ಅವಧಿಯಲ್ಲಿ 48.35 ಇಂಚು ಮಳೆಯಾಗಿತ್ತು.