ಸುಂಟಿಕೊಪ್ಪ, ಆ. 12: ಕೊಡಗು ಜೆ.ಡಿ.ಎಸ್. ಅಧ್ಯಕ್ಷ ಕೆ.ಎಂ. ಗಣೇಶ್ ಅವರು ಪ್ರವಾಹ ಪೀಡಿತ ಮತ್ತು ಭೂ ಕುಸಿತ ಪ್ರದೇಶಗಳಾದ ಕೊಂಡಂಗೇರಿ, ಬೇತ್ರಿ, ಒಳಮಾಳ ಮೂರ್ನಾಡು, ಕಡಗದಾಳು ಗ್ರಾಮದ ಬೊಟ್ಲಪ್ಪ ಪೈಸಾರಿ, ಕಡಗದಾಳುವಿನ ತುರ್ಕರಟ್ಟಿಯ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವುದರ ಮೂಲಕ ಆರ್ಥಿಕ ಸಹಾಯವನ್ನು ಮಾಡಿದರು. ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಗಳ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರವನ್ನು ಒತಾಯಿಸಲು ಮನವಿ ಮಾಡಿದರು. ಇಲ್ಲಿಯ ಪರಿಸ್ಥಿತಿ ಬಗ್ಗೆ ಮಾಜಿ ಮುಖ್ಯಮಂತ್ರಿಗಳು ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಜೆ.ಡಿ.ಎಸ್. ಕಾರ್ಯದರ್ಶಿ ಏನ್.ಸಿ. ಸುನಿಲ್, ಯುವ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಾಶೀರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬೊಳ್ಳಿಯಂಡ ಗಣೇಶ್, ಯುವ ಜೆ.ಡಿ.ಎಸ್. ವಕ್ತಾರ ಜಿನೇಶ್ ಇದ್ದರು.