ಅಧಿಕಾರಿಗಳ ತಂಡ ಭೇಟಿ
ಕೂಡಿಗೆ, ಆ. 12: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರಿನ ತೂಗುಸೇತುವೆಯ ಒಂದು ಭಾಗದ ಸ್ವಲ್ಪ ಹಾನಿಗೊಳಗಾಗಿದ್ದನ್ನು ಶಾಸಕ ರಂಜನ್ ಸೇರಿದಂತೆ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಕಳೆದ ಎರಡು ವರ್ಷಗಳಿಂದ ಸತತವಾಗಿ ಹಾನಿಗೊಳಗಾದ ಈ ತೂಗುಸೇತುವೆಯನ್ನು ವಿಶೇಷ ಅನುದಾನದಲ್ಲಿ ದುರಸ್ತಿ ಮಾಡಲಾಗಿತ್ತು. ಈ ಸಾಲಿನಲ್ಲಿ ಕಾವೇರಿ ನದಿಯ ನೀರು ತೂಗುಸೇತುವೆಯ ಸನಿಹದಲ್ಲಿ ಹರಿದು ಸೇತುವೆಯ ಒಂದು ಭಾಗ ಮುಳುಗಡೆ ಆಗಿತ್ತು. ನದಿ ನೀರಿನ ಮಟ್ಟ ಕುಗ್ಗಿದ್ದು, ಇಲ್ಲಿಗೆ ಭೇಟಿ ನೀಡಿದ ಶಾಸಕ ಹಾನಿಯಾದ ಭಾಗವನ್ನು ದುರಸ್ತಿ ಮಾಡಲು ಪ್ರಸ್ತಾವನೆಯನ್ನು ಕಳುಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಜಿಲ್ಲಾ ಬಿ.ಜೆ.ಪಿ. ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಮನುಕುಮಾರ ರೈ, ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ ಕುಶಾಲನಗರ ಪ್ರಾಧಿಕಾರದ ನಿರ್ದೇಶಕ ವೈಶಾಕ್, ಕಾವೇರಿ ನೀರಾವರಿ ನಿಗಮದ ಹಾರಂಗಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.